26.5 C
Bangalore, IN
Sunday, January 21, 2018
ಡಿಜಿಟಲ್ ಕನ್ನಡ ಟೀಮ್: ಮುಂದಿನ ಬಾರಿ ನೀವು ಪ್ರಯಾಣ ಮಾಡುವಾಗ ಅಥವಾ ಹೊರಗೆ ಇದ್ದಾಗ ಬಾಯಾರಿಕೆಯಾಯ್ತ ವಿವಿಧ ಬ್ರ್ಯಾಂಡ್ ಮಿನರಲ್ ನೀರಿನ ಬದಲಿಗೆ ‘ಸೇನಾ ಜಲ್’ವನ್ನೇ ಕುಡಿಯಿರಿ. ಆ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ ನೀವು ನೆರವಾಗಿ! ಹೌದು, ಇನ್ನುಮುಂದೆ ನೀವು ಸೇನಾ ಜಲ್ ಕುಡಿದಾಗೆಲ್ಲಾ ಪರೋಕ್ಷವಾಗಿ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗಲಿದ್ದೀರಿ. ಅದು ಹೇಗೆ ಎಂದರೆ... ಆರ್ಮಿ ವೈಫ್ಸ್ ವೆಲ್ಫೇರ್ ಅಸೋಸಿಯೇಷನ್ (ಎಡ್ಬ್ಲ್ಯೂಡ್ಬ್ಲ್ಯೂಎ) ಎಂಬ ಸಂಸ್ಥೆ ಸೇನಾ ಜಲ ಎಂಬ ಕುಡಿಯುವ ನೀರು ಮಾರಾಟವನ್ನು ಆರಂಭಿಸಿದೆ. ವಿಶೇಷ ಎಂದರೆ ಇದರಿಂದ ಸಂಗ್ರಹವಾಗುವ ಹಣವನ್ನು ಹುತಾತ್ಮ...
ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಕಡೇಯ ಎಲಿಮಿನೇಷನ್ ನಲ್ಲಿ ಶೃತಿ ಪ್ರಕಾಶ್ ಹೊರ ಬಿದ್ದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ಶೃತಿ ಎಲಿಮಿನೇಟ್ ಆಗಿದ್ದರೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ಮುಗ್ಗರಿಸಿದಂತಾಗಿದೆ. ನಿನ್ನೆಯಷ್ಟೇ ಅನುಪಮಾ ಗೌಡ  ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಆರಂಭದ ದಿನಗಳ...
ಡಿಜಿಟಲ್ ಕನ್ನಡ ಟೀಮ್: ಅಕ್ಕ ಖ್ಯಾತಿಯ ಕಿರುತೆರೆ ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ  ಬಂದಿವೆ. ಬಿಗ್ ಬಾಸ್ ಫಿನಾಲೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗ ಎಲಿಮಿನೇಟ್ ಆಗಿರುವುದು ಅನುಪಮಾಗೆ ದೊಡ್ಡ ನಿರಾಸೆಯಾಗಿದೆ. ಇದರೊಂದಿಗೆ ಅಂತಿಮ ಘಟ್ಟದಲ್ಲಿ ಅನುಪಮಾ ಮುಗ್ಗರಿಸಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಜಗನ್ ಜತಗಿನ ಮನಸ್ತಾಪ, ಮುನಿಸು, ಅಳುವಿನಿಂದ ಹೆಚ್ಚು ಕಾಣಿಸಿಕೊಂಡಿದ್ದ ಅನುಪಮಾ ಕ್ರಮೇಣ ಟಾಸ್ಕ್ ಗಳಲ್ಲಿ ಉತ್ತಮವಾಗಿಪ್ರದರ್ಶನ ನೀಡುತ್ತಾ, ನಗುತ್ತಾ, ಜಾಲಿಯಾಗಿದ್ದರು. ಈ ಬಾರಿಯ ಬಿಗ್ ಬಾಸ್ ಅವತರಣಿಕೆಯಲ್ಲಿ ಮೊದಲ ಹಾಗೂ ಕೊನೆಯ ಕ್ಯಾಪ್ಟನ್ ಆಗಿದ್ದು ಅನುಪಮಾ...
ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್​ವುಡ್​ನ ಕರಿ ಚಿರತೆ ಎಂದೇ ಫೇಮಸ್ ಆಗಿರೋ ನಟ ದುನಿಯಾ ವಿಜಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 43ನೇ ವಸಂತ ಪೂರೈಸಿ, 44ನೇ ವಸಂತಕ್ಕೆ ಕಾಲಿರಿಸಿದ ನಟ ದುನಿಯಾ ವಿಜಯ್​ಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಮಧ್ಯ ರಾತ್ರಿಯೇ ಹೊಸಕೆರೆ ಹಳ್ಳಿಯಲ್ಲಿ ಇರೋ ದುನಿಯಾ ವಿಜಿ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು ಜಯಘೋಷ ಕೂಗಿ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ತಿಳಿಸಿದ್ರು. ಅಭಿಮಾನಿಗಳ ಸಮ್ಮುಖದಲ್ಲೇ ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ್ರು. ಇನ್ನು ದುನಿಯಾ ವಿಜಿ ದಾವಣಗೆರೆಯ...
ಡಿಜಿಟಲ್ ಕನ್ನಡ ಟೀಮ್: ಚಿತ್ರರಂಗದಲ್ಲಿ ಅವಕಾಶಗಳನ್ನು ಹರಸುತ್ತಾ ಬರುವ ಅದೆಷ್ಟೋ ನಟಿಯರು ಕಾಸ್ಟಿಂಗ್ ಕೌಚ್ (ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳುವ) ಸುಳಿಗೆ ಸಿಲುಕಿ ನರಳಿರುವ ಉದಾಹರಣೆ ಸಾಕಷ್ಟಿದೆ. ಈ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಈಗಾಗಲೇ ಅನೇಕ ನಟಿಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಈಗ ಆ ಸಾಲಿಗೆ ಶೃತಿ ಹರಿಹರನ್ ಕೂಡ ಸೇರ್ಪಡೆಯಾಗಿದ್ದಾರೆ. ಅವರೂ ಚಿತ್ರರಂಗದಲ್ಲಿನ ಕೆಟ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದನ್ನು ಹೇಳಿಕೊಂಡಿದ್ದಾರೆ. ಹೌದು, ಹೈದರಾಬಾದಿನಲ್ಲಿ ನಡೆದ ಇಂಡಿಯಾ ಟುಡೆ ಆಯೋಜಿಸಿದ್ದ 'ಸಿನಿಮಾದಲ್ಲಿ ಲೈಂಗಿಕತೆ' ಎಂಬ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್, ತಾವು ಎದುರಿಸಿದ ಕಹಿ ಪರಿಸ್ಥಿತಿಯನ್ನು...
ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಗಳಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದು ಸಾಮಾನ್ಯ. ಭಾರತದ ದೇವಸ್ಥಾನಗಳಿರಲಿ, ವಿದೇಶದ ದೇಗುಲಗಳೇ ಇರಲಿ, ಪ್ರಧಾನಿ ದೇವರ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಕೆಲ ಕಾಲ ಧ್ಯಾನಸ್ಥರಾಗಿ ಕುಳಿತು ಕೊಳ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ ಅನ್ನೋ ಸ್ಫೋಟಕ ವಿಚಾರ ಹೊರ ಬಿದ್ದಿದೆ. ಈ ಮಾತು ಎಷ್ಟು ಸತ್ಯ ಅನ್ನೋದೇ ಡೌಟ್..! ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಹಿಂದೂಗಳಲ್ಲ ಅಂತಾ ಹೇಳಿರೋದು ಓರ್ವ ನಟ ಪ್ರಕಾಶ್ ರೈ. ಈ ಮಾತು ಎಷ್ಟು ಸತ್ಯ?...
ಡಿಜಿಟಲ್ ಕನ್ನಡ ಟೀಮ್: ಪ್ರವೀಣ್ ತೊಗಾಡಿಯಾ ಹೆಸರು ಹೇಳ್ತಿದ್ದ ಹಾಗೆ ಒಂದು ಹಿಂದುತ್ವದ ಚಹರೆ ಕಣ್ಣು ಮುಂದೆ ಹಾದು ಹೋಗುತ್ತೆ. ಭಾಷಣ ಮಾಡಲು ನಿಂತರೆ ಪ್ರಖರ ಹಿಂದುತ್ವ ಎಂತವರನ್ನೂ ಕ್ಷಣಮಾತ್ರ ಸೆಳೆಯದೆ ಇರಲ್ಲ. ಇಂತಹ ವ್ಯಕ್ತಿತ್ವ ಇರುವ ವ್ಯಕ್ತಿಗಳಿಗೆ ಪ್ರೀತಿಸುವವರು ಎಷ್ಟು ಜನರಿರುತ್ತಾರೋ ಅಷ್ಟೇ ಪ್ರಮಾಣದಲ್ಲಿ ವಿರೋಧಿಗಳು ಇರುತ್ತಾರೆ ಅನ್ನೋದು ಕಟುಸತ್ಯ. ಅದರೆ ಅನ್ಯ ಕೋಮಿಗೆ ಸೇರಿದ ವ್ಯಕ್ತಿಗಳು ಇವರನ್ನು ಟಾರ್ಗೆಟ್ ಮಾಡಿದ್ರೆ ಇರಬಹುದೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತೆ. ಆದರೆ ಇವರನ್ನು ಟಾರ್ಗೆಟ್ ಮಾಡಿರೋದು ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ ತೊಟ್ಟ ಆರಕ್ಷರಂತೆ. ಈ ಮಾತನ್ನು...
ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಖ್ಯಾತ ನಿರ್ದೇಶಕ, ನಟ ಕಾಶಿನಾಥ್ ಗುರುವಾರ ವಿಧಿವಶರಾಗಿದ್ದಾರೆ. ಕೆಮ್ಮು ಹಾಗೂ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದ ಕಾಶಿನಾಥ್ ಅವರು ಮೃತಪಟ್ಟಿರುವುದು ಕನ್ನಡ ಸಿನಿ ಪ್ರೇಕ್ಷಕರಿಗೆ ದೊಡ್ಡ ಶಾಕ್  ಆಗಿದೆ. ಇವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಕಾಶಿನಾಥ ಅವರ ಆಪ್ತರು ಇದು ಸುಳ್ಳು ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರ ಅಭಿಮನ್ಯುವಿಗಾಗಿ ಒಂದು ಸಿನಿಮಾ ಮಾಡಲು ನಿರ್ಧರಿಸಿ ಆ ಬಗ್ಗೆ ಚರ್ಚೆ ನಡೆಸಿದ್ದರು ಎಂಬುದು ತಿಳಿದು ಬಂದಿದೆ. ಕನ್ನಡ...
ಡಿಜಿಟಲ್ ಕನ್ನಡ ಟೀಮ್: ಕೋಮುಭಾವನೆ ಪ್ರಚೋದಿಸಿ ಸಮಾಜದ ಸ್ವಾಸ್ಥ ಹಾಳು ಮಾಡುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಖ್ಯಮಂತ್ರಿ ಸಿದ್ದರಾಯ್ಯ ಮುಂದಾಗಿದ್ದಾರೆ. ಅದುವೇ ಗೂಂಡಾ ಕಾಯ್ದೆ! ಹೌದು, ರಾಜ್ಯದಲ್ಲಿ ಸಮುದಾಯ ದ್ವೇಷ, ಹತ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಿದ್ರಾಮಯ್ಯನವರು ಈ ನಿರ್ಧಾರಕ್ಕೆ ಬಂದಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ‘ಕೋಮು ಭಾವನೆ ಬಿತ್ತುವವರ ವಿರುದ್ಧ ಗೂಂಡಾ ಕಾಯಿದೆ ಬಳಸಿ, ಗಡಿಪಾರು ಮಾಡಿ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ...
ಡಿಜಿಟಲ್ ಕನ್ನಡ ವಿಶೇಷ: ಸ್ವತಂತ್ರ ಭಾರತದಲ್ಲಿ ಕಳೆದ ಆರು ದಶಕಗಳಿಂದಲೂ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಗೆ ಕೇಂದ್ರ ಸರ್ಕಾರ ಈಗ ಬ್ರೇಕ್ ಹಾಕಿದೆ. 2012ರಲ್ಲೇ ಸುಪ್ರೀಂ ಕೋರ್ಟ್ ಹಜ್ ಸಬ್ಸಿಡಿಯನ್ನು 2022ರ ಒಳಗಾಗಿ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ತಿಳಿಸಿತ್ತು. ಅದರಂತೆ ಈ ವರ್ಷದಿಂದ ಹಜ್ ಯಾತ್ರಿಕರಿಗೆ ಯಾವುದೇ ಸಬ್ಸಿಡಿ ನೀಡುವುದಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ನಿರ್ಧಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಸುಮಾರು 60ವರ್ಷಗಳ ನಂತರ ಭಾರತದಿಂದ ಸಬ್ಸಿಡಿ ರಹಿತವಾಗಿ ಜನರು ಹಜ್ ಯಾತ್ರೆ ಮಾಡಲಿದ್ದಾರೆ. ಸರ್ಕಾರದ ಈ ನಿರ್ಧಾರ ಪ್ರಕಟಿಸಿರುವ...
ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ‘ಸೂ… ಮಗ, ಬೋ… ಮಗ’ ಎಂದೆಲ್ಲ ಜರಿದಿದ್ದ ಕಾಂಗ್ರೆಸ್ ನಾಯಕ ಹಾಗೂ ನಗರಾಭಿವೃದ್ಧಿ ಸಚಿವ ರೋಷನ್ ಗೆ ಈಗ ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿದೆ. ಮೋದಿಯನ್ನು ನಿಂದಿಸಿದರು ಎಂಬ ಕಾರಣಕ್ಕೆ ಈ ನೋಟಿಸ್ ಬಂದಿಲ್ಲ. ಬದಲಿಗೆ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ರೋಷನ್ ಬೇಗ್‌ ಮತ್ತವರ ಕುಟುಂಬ ಸದಸ್ಯರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿಗೊಳಿಸಿದೆ. ಬೇಗ್ ಕುಟುಂಬದ ಒಡೆತನದಲ್ಲಿರುವ ರುಮಾನ್ ಎಂಟರ್ ಪ್ರೈಸಸ್ ಕಂಪನಿ ಕಳೆದ ಏಳೆಂಟು ವರ್ಷದಿಂದ...
ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ವಿಷಯದಲ್ಲಿ ಭಾರತ ಶಾಂತಿ ಪಠಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಅಲ್ಲಿಂದಲ್ಲಿಗೆ ಲೆಕ್ಕ ಚುತ್ತಾ ಮಾಡುವುದಷ್ಟೇ ಭಾರತದ ಕೆಲಸ. ಸದ್ಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನ್ಯಕ್ಕೆ ಹಾಗೂ ಜಮ್ಮು ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಸೋಮವಾರ ಇಂತಹುದೇ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಏಳು ಯೋಧರು ಹಾಗೂ ನಾಲ್ವರು ಉಗ್ರರ ಸಂಹಾರದೊಂದಿಗೆ ಸೇನಾ ದಿನವನ್ನು ಭರ್ಜರಿಯಾಗಿ ಆಚರಿಸಿದೆ! ಕಳೆದ ಕೆಲವು ದಿನಗಳಿಂದ ಗಡಿಯಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ಮತ್ತೆ ಬಾಲ ಬಿಚ್ಚುತ್ತಿದೆ. ಪಾಕಿಸ್ತಾನದ ಕುತಂತ್ರದ ದಾಳಿಗೆ ಕಳೆದ ಶನಿವಾರ ಭಾರತೀಯ...
ಡಿಜಿಟಲ್ ಕನ್ನಡ ವಿಶೇಷ: ಜನತಾ ಪಕ್ಷದಿಂದ ನಾಯಕರಾಗಿ ಬೆಳೆದು ಬಂದ ಸಿಎಂ ಇಬ್ರಾಹಿಂ ಮತ್ತೆ ಜನತಾ ಪರಿವಾರದ ಕಡೆಗೆ ಮುಖ ಮಾಡಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿವೆ. ಇದಕ್ಕೆ ಕಾರಣ ಅಂದ್ರೆ ಸಂಕ್ರಾಂತಿ ಶುಭಾಶಯ ಕೋರುವ ನೆಪದಲ್ಲಿ ಪದ್ಮನಾಭನಗರದಲ್ಲಿರುವ ದೊಡ್ಡ ಗೌಡರ ಮನೆಗೆ ಇಬ್ರಾಹಿಂ ಹೋಗಿದ್ದು. ಕಾಂಗ್ರೆಸ್ ನಲ್ಲಿ ಇತ್ತೀಚಿಗೆ ಪರಿಷತ್ ಸದಸ್ಯರಾಗಿರುವ ಸಿಎಂ ಇಬ್ರಾಹಿಂ ಸಿಎಂ ಸಿದ್ದರಾಮ್ಮಯ್ಯ ಅವರ ಸಂಪುಟದಲ್ಲಿ ಸಚಿವರಾಗುವ ಕನಸು ಕಂಡಿದ್ದರು. ಸಚಿವ ಸ್ಥಾನದ ಬಗ್ಗೆ ಸಿಎಂ ಜೊತೆ ಹಲವು ಬಾರಿ ಚರ್ಚೆ ಕೂಡ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಕೂಡ ಸಚಿವರನ್ನಾಗಿ...
ರಾಜಕೀಯ ಲೆಕ್ಕಾಚಾರಗಳು ಬರೀ ಲೆಕ್ಕಾಚಾರಗಳಷ್ಟೇ. ಎಲ್ಲ ಬಾರಿಯೂ ಅವು ನಿಜವಾಗಬೇಕು ಎಂದೇನೂ ಇಲ್ಲ. ಏಕೆಂದರೆ ಅವು ಬರೀ ನಿರೀಕ್ಷೆ ಅಷ್ಟೇ. ಹೀಗಾಗಿ ಘಟಾನುಘಟಿ ರಾಜಕೀಯ ಪಂಡಿತರ ಎಣಿಕೆಗಳು ಮಖಾಡೆ ಮಲಗಿರುವುದು ಉಂಟು. ಲೆಕ್ಕಕ್ಕೆ ತೆಗೆದುಕೊಂಡವರು ವಿಳಾಸ ಪತ್ತೆ ಇಲ್ಲದಂತೆ ಹೋಗಿರುವುದು, ಲೆಕ್ಕಕ್ಕೆ ತೆಗೆದುಕೊಳ್ಳದಿರುವವರು ಫೀನಿಕ್‌ಸ್‌ ನಂತೆ ಎದ್ದು ಬಂದಿರುವ ಅನೇಕ ನಿದರ್ಶನಗಳು ರಾಜಕೀಯ ಇತಿಹಾಸದಲ್ಲಿ ದಾಖಲಾಗಿ ಹೋಗಿವೆ. ಹೀಗಾಗಿ ಯಾರು ಏನೇ ಹೇಳಲಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾಸ್ವಾಮಿ ಅವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ! ನಿಜ, ಐದು ತಿಂಗಳು ಮೊದಲೇ...

ಎಲ್ಲ ಓದುಗರು, ನೋಡುಗರು, ಹಿತೈಷಿಗಳಿಗೆ ಸಂಕ್ರಾಂತಿ ಶುಭಾಶಯಗಳು...
ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಾರತದ ಆತ್ಮೀಯ ಸ್ನೇಹಿತನಾಗಿ ಇಸ್ರೇಲ್ ಹೊರಹೊಮ್ಮುತ್ತಿರುವುದು ಗಮನಾರ್ಹ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ ಅಮೆರಿಕ ಹಾಗೂ ಇಸ್ರೇಲ್ ಜತೆಗಿನ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳುತ್ತಿರುವುದಕ್ಕೆ ಕಳೆದೆರಡು ವರ್ಷಗಳಲ್ಲಿ ಭಾರತದೊಂದಿಗೆ ಆ ರಾಷ್ಟ್ರಗಳ ಸಂಬಂಧವೇ ಸಾಕ್ಷಿ. ಈಗ ಇಸ್ರೇಲ್ ಜತೆಗಿನ ಸ್ನೇಹ ಎಂತಹದು ಎಂಬುದನ್ನು ಇಡೀ ವಿಶ್ವಕ್ಕೆ ಸಾರಲಿದೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಪ್ರವಾಸ! ಹೌದು, ಜೆರುಸಲೆಮ್ ಅನ್ನು ಇಸ್ರೇಲಿನ ರಾಜಧಾನಿಯನ್ನಾಗಿ ಮಾಡುವ ಅಮೆರಿಕ ಪ್ರಯತ್ನಕ್ಕೆ ಭಾರತ ಮತ ಚಲಾಯಿಸಿ ಇನ್ನು ಒಂದು ತಿಂಗಳು ಕೂಡ ಆಗಿಲ್ಲ. ಇಸ್ರೇಲ್ ವಿರೋಧಿಸುವ...
ಡಿಜಿಟಲ್ ಕನ್ನಡ ಟೀಮ್: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೀಲಿಚಿತ್ರ ತಾರೆ ಜತೆಗಿನ ಸಂಬಂಧ ಮುಚ್ಚಿಡಲು ಆಕೆಗೆ ಹಣ ನೀಡಿದ್ದರು’ ಎಂಬ ಗಂಭೀರ ಆರೋಪ ಟ್ರಂಪ್ ವಿರುದ್ಧ ಕೇಳಿ ಬಂದಿದೆ. ‘ಟ್ರಂಪ್ ಆಪ್ತ ಹಾಗೂ ನಂಬಿಕಸ್ತ ವಕೀಲ ಸೈಕಲ್ ಕೊಹೆನ್ 2016ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಕಾವು ಹೆಚ್ಚಾಗಿದ್ದ ಸಂದರ್ಭದಲ್ಲಿ ನೀಲಿಚಿತ್ರ ತಾರೆ  ಸ್ಚೆಫಾನಿಯಾ ಕ್ಲಿಫೋರ್ಡ್ (ಸ್ಚೋರ್ಮಿ ಡೇನಿಯಲ್ಸ್) ಅವರಿಗೆ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು 1.30 ಲಕ್ಷ ಅಮೆರಿಕನ್ ಡಾಲರ್ ಹಣ ನೀಡಿದ್ದರು. 2006ರಲ್ಲಿ ಅಂದರೆ ಟ್ರಂಪ್ ತಮ್ಮ...
ಡಿಜಿಟಲ್ ಕನ್ನಡ ಟೀಮ್: ಮುಂದಿನ ವಾರ ಭಾರತ ಪ್ರವಾಸ ಮಾಡಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಆತ್ಮೀಯ ಸ್ನೇಹಿತ ಮೋದಿಗೆ 'ಗಾಲ್ ಜೀಪ್' ಅನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಬೆಂಜಮಿನ್ ಅವರ ಈ ಪ್ರವಾಸದಲ್ಲಿ ಉಭಯ ರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಒಪ್ಪಂದ ನಡೆಯುವ ಸಾಧ್ಯತೆಗಳಿವೆ. ಈ ಎಲ್ಲದರ ನಡುವೆ ನೆತನ್ಯಾಯು ಅವರು ಮೋದಿಗೆ ನೀಡುತ್ತಿರುವ ಈ ವಿಶೇಷ ಉಡುಗೊರೆ ಸಾಕಷ್ಟು ಗಮನ ಸೆಳೆದಿದೆ. ಹಾಗಾದರೆ ಈ ಗಾಲ್ ಜೀಪ್ ಏನು? ಇದರ ವಿಶೇಷತೆಗಳೇನು? ಈ ಜೀಪ್ ಕೊಡಲು ಕಾರಣವೇನು? ಎಂಬುದನ್ನು ನೋಡೋಣ ಬನ್ನಿ. ಈ...
ಡಿಜಿಟಲ್ ಕನ್ನಡ ಟೀಮ್: ತನ್ನ ಪ್ರೀತಿಯ ಮಡದಿಗೆ ಒಂದು ಮನೆ ಕಟ್ಟಿಕೊಡುವ ಆಸೆಯೊಂದಿಗೆ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಿರೂಪಕ ರಿಯಾಜ್ ಬಾಷಾ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ರಿಯಾಜ್ ಎಂದೇ ಹೆಸರು ಪಡೆದಿರೋ ರಿಯಾಜ್, ಪ್ರಶಸ್ತಿ ಗೆದ್ದೇ ಗೆಲ್ಲಬೇಕು ಎಂದು ಪಣ ತೊಟ್ಟಿದ್ದರು.  ತಮ್ಮ ಈ ಆಸೆಯನ್ನು ಈ ಹಿಂದೆ ಅನೇಕ ಬಾರಿ ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ನಕಾರಾತ್ಮಕ ಅಭಿಪ್ರಾಯ ಪಡೆದಿದ್ದ ರಿಯಾಜ್ ಈಗ...
ಡಿಜಿಟಲ್ ಕನ್ನಡ ಟೀಮ್: ಮಂಗಳೂರಿನ ದೀಪಕ್ ರಾವ್ ಮರ್ಡರ್ ಆರೋಪಿಗಳ ಸಖ್ಯ ಹೊಂದಿದ್ದ 'ಟಾರ್ಗೆಟ್ ಗ್ರೂಪ್' ಮುಖಂಡ ಇಲಿಯಾಸ್ ನನ್ನು ಉಳ್ಳಾಲ ಸಮೀಪದ ಆತನ ಮನೆಯಲ್ಲೇ ಶನಿವಾರ ಬೆಳಗ್ಗೆ ಕತ್ತಿಯಿಂದ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವ ಕಾಂಗ್ರೆಸ್ ಉಳ್ಳಾಲ ಘಟಕದ ಉಪಾಧ್ಯಕ್ಷ ಕೂಡ ಆಗಿದ್ದ ಇಲಿಯಾಸ್ ನನ್ನು ಮಂಗಳೂರಿನ ಜಪ್ಪು, ಕುಡುಪಾಡಿಯಲ್ಲಿರುವ ಆತನ ಮನೆಗೆ ಬೆಳಗ್ಗೆ 9 ರ ಸುಮಾರಿಗೆ ಮನೆಗೆ ನುಗ್ಗಿದ ಅವನದೇ ಸಮುದಾಯದ ಇಬ್ಬರು ಈ ಕಗ್ಗೊಲೆ ಮಾಡಿದ್ದಾರೆ. ಕೊಲೆ, ಸುಲಿಗೆ, ಕೊಲೆಯತ್ನ, ಅತ್ಯಾಚಾರ ಸೇರಿದಂತೆ ಸುಮಾರು ಹದಿನೆಂಟು ಪ್ರಕರಣಗಳ ವಿಚಾರಣೆ...
ಡಿಜಿಟಲ್ ಕನ್ನಡ ಟೀಮ್: ನ್ಯಾಯದಾನ ವ್ಯವಸ್ಥೆಯಲ್ಲಿ ದೇಶದ ಪರಮೋಚ್ಛ ಸ್ಥಾನದಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಡುವೆ ಒಡಕು ಕಾಣಿಸಿಕೊಂಡಿದೆ. ಒಳಗೊಳಗೇ ನಡೆಯುತ್ತಿದ್ದ ತಿಕ್ಕಾಟ ಇದೀಗ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಹಿರಂಗವಾಗಿಯೇ ತಿರುಗಿ ಬೀಳುವ ಮೂಲಕ ಸಾರ್ವಜನಿಕವಾಗಿ ಅನಾವರಣಗೊಂಡಿದೆ. ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯದಾನ ವ್ಯವಸ್ಥೆ ಸರಿಯಿಲ್ಲ. ಸಾಕಷ್ಟು ಲೋಪದೋಷಗಳಿಗೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕಾರ್ಯವೈಖರಿಯೂ ಪ್ರಶ್ನಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್,ಕುರಿಯನ್ ಜೋಸೆಫ್ ಹಾಗೂ ಲೋಕೂರ್ ಅವರು ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಸಿಡಿಸಿರುವ ಮಾತಿನ...
ಡಿಜಿಟಲ್ ಕನ್ನಡ ಟೀಮ್: ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತರ ಪ್ರಬಲ ರಾಷ್ಟ್ರಗಳ ಜತೆ ಮುಂಚೂಣಿಯಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಈಗಾಗಲೇ ಅನೇಕ ದಾಖಲೆ ನಿರ್ಮಿಸಿದ್ದು, ಶುಕ್ರವಾರ 100ನೇ ಉಪಗ್ರಹ ಕಾರ್ಚೊಸ್ಯಾಟ್-2 ಉಡಾವಣೆ ಮಾಡುವ ಮೂಲಕ ಮತ್ತೊಂದು ಇತಿಹಾಸ ಬರೆದಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಕ್ಕೆ 9.28ಕ್ಕೆ ಕಾರ್ಟೊಸ್ಯಾಟ್-2 ಹಾಗೂ30 ಇತರೆ ಉಪಗ್ರಹವನ್ನು  ಇಸ್ರೋ ತನ್ನ ನಂಬಿಕಸ್ಥ ಉಪಗ್ರಹ ವಾಹನ (ರಾಕೆಟ್) ಪಿಎಸ್ಎಲ್ ವಿ-ಸಿ40 ಮೂಲಕ ಉಡಾವಣೆ ಮಾಡಿದೆ. ಈ ಉಪಗ್ರಹಗಳು ನಿರ್ದಿಷ್ಟ ಕಕ್ಷೆಗೆ ಸೇರುವ ಪ್ರಕ್ರಿಯೆ ಪೂರ್ಣಗೊಳ್ಳಲು 2.21 ಗಂಟೆ...
ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರಕಾರ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದುರುಳಿಸಲು ಸಜ್ಜಾಗಿದೆ. ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿರುವ ತಲಾ ಎರಡು ಮುಸ್ಲಿಂ ಹಾಗೂ ಹಿಂದೂ ಸಂಘಟನೆಗಳ ನಿಷೇಧಕ್ಕೆ ಅದು ಮುಂದಾಗಿದೆ. ಪೀಪಲ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಭಾರತೀಯ ಸಮಾಜವಾದಿ ಪ್ರಜಾಸತ್ತಾತ್ಮಕ ಪಕ್ಷ (ಎಸ್ಡಿಪಿಐ), ಭಜರಂಗದಳ ಹಾಗೂ ಶ್ರೀರಾಮಸೇನೆ ನಿಷೇಧಕ್ಕೆ ಗೃಹ ಇಲಾಖೆ ವರದಿ ಸಿದ್ಧಪಡಿಸಿದೆ. ಪ್ರಸ್ತುತ 'ಸಾಧನೆ ಸಂಭ್ರಮ' ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿಗೆ ಮರಳಲಿದ್ದು, ಗೃಹ ಇಲಾಖೆ ಜತೆ ಮತ್ತೊಂದು ಸುತ್ತಿನ ಕೂಲಂಕಷ ಸಮಾಲೋಚನೆ ನಂತರ ಅತಿ ಶೀಘ್ರದಲ್ಲೇ...
ಡಿಜಿಟಲ್ ಕನ್ನಡ ಟೀಮ್: ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದೇ ಹೇಳಿದ್ದು. ಆದರೆ ತುಮಕೂರಿನ ಶಿರಾ, ಕೊರಟಗೆರೆ, ಪಾವಗಡ, ಮಧುಗಿರಿಯಲ್ಲಿ ಗುರುವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಏಕಾಂಗಿಯಾಗಿದ್ದ ಯಡಿಯೂರಪ್ಪ ಅವರನ್ನು ನೋಡಿದಾಗ ಅಮಿತ್ ಶಾ ಪಾಠ ಇನ್ನೂ ನಾಟಿಲ್ಲ ಎಂಬುದು ಢಾಳಾಗಿ ರಾರಾಜಿಸುತ್ತಿತ್ತು! ಅಮಿತ್ ಶಾ ನೀಡಿರುವ ಹಲವು ಭೇಟಿಗಳ ಹಿಂದಿನ ಉದ್ದೇಶ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹಕ್ಕೆ ಬೇಲಿ ಹಾಕುವುದೇ ಆಗಿತ್ತು....
ಡಿಜಿಟಲ್ ಕನ್ನಡ ಟೀಮ್: ಗೋರಕ್ಷಣೆ, ಗೋಮಾಂಸ ಸಾಗಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ.ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಬಿಜೆಪಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಸಾಯಿಖಾನೆಗಳನ್ನೇ ಬಂದ್ ಮಾಡಿಸಿದ್ದಾರೆ. ಆದರೆ ಅದೇ ಪಕ್ಷ ಪ್ರತಿನಿಧಿಸುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕದಿಂದ ತಮ್ಮ ರಾಜ್ಯಕ್ಕೆ ಗೋಮಾಂಸ ಸಾಗಣೆಗೆ ತಡೆ ಒಡ್ಡುವ ಗೋರಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಗೋಹತ್ಯೆ, ಗೋಮಾಂಸ ಸಾಗಣೆ ಮತ್ತು ಗೋಮಾಂಸ ಸೇವನೆ ಸಂಬಂಧ ಬಿಜೆಪಿಯಲ್ಲೇ ಇರುವ ದ್ವಂದ್ವಗಳಿಗೆ ಇದು ಕನ್ನಡಿ...
ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬರಲಿದ್ದಾರೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಬಂದಿದೆ. ಇದಾಗಲೇ ಪವನ್ ಕಲ್ಯಾಣ್ ರೊಂದಿಗೆ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ತೆಲುಗು ಭಾಷಿಕರು ಹೆಚ್ಚಿರುವ ಬಳ್ಳಾರಿ ಸೇರಿದಂತೆ ಗಡಿನಾಡಿನ ಅನೇಕ ಕಡೆ ಪವನ್ ಮೂಲಕ ಜೆಡಿಎಸ್ ಗೆ ಮತ ಬಾಚುವ ಲೆಕ್ಕಾಚಾರ ಎಚ್ಡಿಕೆಯವರದ್ದು. ತಮ್ಮ ಟ್ವಿಟ್ಟರ್  ಖಾತೆ ಮುಖಾಂತರ ಪವನ್ ಕಲ್ಯಾಣ್ ಸಿನಿಮಾ ಅಜ್ಞಾತವಾಸಿಗೆ  ಶುಭ ಕೋರಿ ಎಚ್ಡಿಕೆ ಟ್ವೀಟ್ ಮಾಡಿದ್ದಾರೆ. ಸಿನಿಮಾ ಯಶಸ್ವಿಯಾಗಲಿ, ಪ್ರಶಸ್ತಿ ತಂದುಕೊಡಲಿ ಎಂದಿದ್ದಾರೆ. ಸಾಮಾನ್ಯವಾಗಿ ಟ್ವೀಟ್ ಗೀಟ್ ಅಂತೆಲ್ಲ...
ಡಿಜಿಟಲ್ ಕನ್ನಡ ಟೀಮ್: ಬಿಜೆಪಿ, ಆರ್‌ಎಸ್‌ಎಸ್, ಭಜರಂಗ ದಳದವರೇ ಉಗ್ರಗಾಮಿಗಳು. ಅವರನ್ನು ಮೊದಲು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಧರ್ಮ ಮತ್ತು ಕೋಮು ಆಧರಿಸಿ ರಾಜಕೀಯ ಮಾಡುತ್ತಿರುವುದು ಬಿಜೆಪಿಯವರು. ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಅದನ್ನು ಸಹಿಸುವುದಿಲ್ಲ.  ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಭಜರಂಗ ದಳದವರು ಉಗ್ರಗಾಮಿಗಳಂತೆ ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇತ್ತ ಆನಂದರಾವ್ ವೃತ್ತದಲ್ಲಿ ಧನ್ಯಶ್ರೀ ಮೇಲೆ ನಡೆದ...
ಡಿಜಿಟಲ್ ಕನ್ನಡ ಟೀಮ್: 'ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಮಾತನಾಡುವುದರಿಂದ ಕೇವಲ ಸಮಯ ವ್ಯರ್ಥವಾಗುತ್ತದೆ...' ಇಂತಹ ಹೇಳಿಕೆ ಕೊಟ್ಟಿರೋದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್. 'ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸುತ್ತೇವೆಯೇ ಹೊರತು. ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದಿಲ್ಲ' ಎಂದು ಅಖಿಲೇಶ್ ಕಡ್ಡಿ ಮುರಿದಂತೆ ಹೇಳಿದ್ದಾರೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಹವಾಸ ಮಾಡಿ ಮುಗ್ಗರಿಸಿದ್ದು ಅಖಿಲೇಶ್ ಇಂತಹ ಗಟ್ಟಿ ನಿರ್ಧಾರಕ್ಕೆ ಬರಲು...
ಡಿಜಿಟಲ್ ಕನ್ನಡ ಟೀಮ್: 'ದೇಶದಲ್ಲಿರುವ ಎಲ್ಲಾ ಮದ್ರಾಸಗಳನ್ನು ನಿಷೇಧಿಸಿ ಅಥವಾ ಶಾಲೆಗಳನ್ನಾಗಿ ಪರಿವರ್ತಿಸಿ...' ಹೀಗೊಂದು ಬೇಡಿಕೆ ಮುಂದಿಟ್ಟು ಶಿಯಾ ವಕ್ಫ್ ಬೋರ್ಡ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ಮೋದಿ ಸರ್ಕಾರ ಮಂಡಿಸಿರುವ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಹಿನ್ನೆಲೆಯ ತ್ರಿವಳಿ ತಲಾಕ್ ಪದ್ಧತಿ ನಿಷೇಧ ಕುರಿತ ವಿಧೇಯಕ ಲೋಕಸಭೆಯಲ್ಲಿ ಅಂಗೀಕೃತವಾಗಿದೆ. ರಾಜ್ಯಸಭೆಯಲ್ಲಿ ಇನ್ನಷ್ಟೇ ಅನುಮೋದನೆ ಪಡೆಯಬೇಕಿದೆ. ಈ ಹಂತದಲ್ಲಿ ಶಿಯಾ ವಕ್ಫ್ ಮಂಡಳಿ ಮದರಸಾಗಳನ್ನು ಮುಚ್ಚಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಭಾರತಕ್ಕೆ ಸ್ವಾತಂತ್ರ...
ಡಿಜಿಟಲ್ ಕನ್ನಡ ಟೀಮ್: 'ಲೇ ಅಧ್ಯಕ್ಷ... ನಿಂತ್ಕೊಳೋ ಇಲ್ಲಿ, ನಮ್ಮ ಭಾಗದ ಸಮಸ್ಯೆ ಸ್ವಲ್ಪ ಕೇಳೋ ಇಲ್ಲಿ. ಬರೀ ಚಮಚಾಗಿರಿ ಮಾಡ್ಕೊಂಡೇ ಅಧ್ಯಕ್ಷ ಆಗಿದ್ದೀಯ, ನೀ ಉದ್ಧಾರ ಆಗಲ್ಲ..' ಮಾಜಿ ಸಚಿವ ವೈಜನಾಥ ಪಾಟೀಲರು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಕಾಂಗ್ರೆಸ್ ಕಚೇರಿ ಎದಿರು ಮಂಗಳವಾರ ತರಾಟೆಗೆ ತೆಗೆದುಕೊಂಡ ಪರಿ ಇದು. ಪಾಟೀಲರ ಮಾತಿನ ಭರಾಟೆಗೆ ಅಲ್ಲಿದ್ದವರೆಲ್ಲ ದಂಗು ಬಡಿದು ಹೋದರು. ಆಗಿದ್ದೇನಪ್ಪಾ ಅಂತಂದ್ರೇ.., ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಪಾಟೀಲರು ಇವತ್ತು ಮಧ್ಯಾಹ್ನ ಪರಮೇಶ್ವರ ಅವರನ್ನು ಭೇಟಿ ಮಾಡಲು ಬಂದರು. ಆದರೆ...
ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯ ಒಬ್ಬ ತಲೆತಿರುಕ. ಹೀಗಾಗಿ ಹುಚ್ಚನಂತೆ ಊರೂರು ಅಲೆಯುತ್ತಾ ಬಾಯಿಗೆ ಬಂದಂತೆ ಮಾತಾಡಾತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಕಟಕಿಯಾಡಿದ್ದಾರೆ. ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಸಿದ್ದರಾಮಯ್ಯ ಗೋಮಾಂಸವನ್ನೂ ತಿಂದುಕೊಳ್ಳಲಿ. ಆದರೆ ಗೋಮಾಂಸ ಸೇವನೆ, ಗೋಹತ್ಯೆ ಬಗ್ಗೆ ಪಾಠ ಹೇಳೋದು ಬೇಡ. ಗೋಮಾಂಸ ಸೇವನೆ ಪ್ರತಿಪಾದಿಸುವ ಅವರಿಗೆ, ಹಿಂದೂಗಳ ಸರಣಿ ಹತ್ಯೆ ತಡೆಯಲು ಆಗದ ಅವರಿಗೆ ಹಿಂದುತ್ವದ ಬಗ್ಗೆ ಮಾತಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ಮಂಗಳವಾರ ತಿಳಿಸಿದ್ದಾರೆ. ಅವರು ಹೇಳಿದ್ದಿಷ್ಟು: 'ಮಾತಿಗೆ ಮುಂಚೆ ನನ್ನನ್ನು ಜೈಲಿಗೆ ಹೋಗಿ ಬಂದವರು...
ಡಿಜಿಟಲ್ ಕನ್ನಡ ಟೀಮ್: ಗಡಿ ರಾಜ್ಯ ಅರುಣಾಚಲ ಪ್ರದೇಶ ನಮ್ಮದು ಎಂದು ಬೊಗಳೆ ಬಿಡುವ ಚೀನಾ ತನ್ನ ಉದ್ದಟತನದಿಂದ ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಈಗ ಭಾರತ ಕೊಟ್ಟ ಏಟಿಗೆ ಬಾಲ ಮುದುರಿಕೊಂಡು ಕಾಮಗಾರಿ ನಿಲ್ಲಿಸಿ ಹಿಂದಕ್ಕೆ ಹೋಗಿದೆ. ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಭಾರತ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಅದರ ಮೇಲೆ ತನ್ನ ನಿಯಂತ್ರಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಮಧ್ಯೆ ಚೀನಾ ಬಂದು ಅಲ್ಲಿ ಕಡ್ಡಿಯಾಡಿಸುವ ಕೆಲಸ ಮಾಡುತ್ತಿದೆ. ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಬಿಸಿಂಗ್ ಪ್ರದೇಶದಲ್ಲಿ ಚೀನಾ ಕಾರ್ಮಿಕರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ....
ಡಿಜಿಟಲ್ ಕನ್ನಡ ಟೀಮ್: ನಾನು ಬೆಳೆಸಿದ ಸಿದ್ದರಾಮಯ್ಯ ನನ್ನ ಬೆನ್ನಿಗೇ ಚೂರಿ ಹಾಕಿದವರು. ಅಧಿಕಾರಕ್ಕೋಸ್ಕರ ಕಾಂಗ್ರೆಸ್ಸಿಗೆ ಹೋಗಿ ನನಗೆ ದ್ರೋಹ ಮಾಡಿದರು. ಅವರಿಗೆ ಮುಂದಿನ ಚುನಾವಣೆಯಲ್ಲಿ 'ಸೋಲು ಭಾಗ್ಯ' ಖಚಿತ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ. ಸಿದ್ದರಾಮಯ್ಯ ಅವರನ್ನು ನಾನು ಉಪಮುಖ್ಯಮಂತ್ರಿ ಮಾಡಿದ್ದೆ. ಆಗ ಕುಮಾರಸ್ವಾಮಿಯನ್ನು ಮಂತ್ರಿ ಕೂಡ ಮಾಡಿರಲಿಲ್ಲ. ಒಂದೊಮ್ಮೆ ಕುಮಾರಸ್ವಾಮಿಯನ್ನು ಅಧಿಕಾರದಲ್ಲಿ ನೋಡಬೇಕೆಂದಿದ್ದರೆ ಸಿದ್ದರಾಮಯ್ಯ ಬದಲು ಅವನನ್ನೇ ಉಪಮುಖ್ಯಮಂತ್ರಿ ಮಾಡುತ್ತಿದ್ದೆ. ನನಗೆ ಮೋಸ ಮಾಡಿ ಕಾಂಗ್ರೆಸ್ಸಿಗೆ ಹೋದ ಸಿದ್ದರಾಮಯ್ಯ ಈಗ ನನ್ನ ವಿರುದ್ಧವೇ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಪಾವಗಡದಲ್ಲಿ ಮನೆ...
ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರದು ರಾಕ್ಷಸೀ ಪ್ರವೃತ್ತಿ ಹಿಂದುತ್ವ. ನಮ್ಮದು ಮನುಷ್ಯತ್ವದ ಹಿಂದುತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯೋಗಿ ಅವರು ಹೇಳಿದಂತೆ ಚುನಾವಣೆ ಹತ್ತಿರ ಬಂತು ಅಂತಾ ನಾನು ಹಿಂದುತ್ವ ಪ್ರತಿಪಾದಿಸುತ್ತಿಲ್ಲ. ಅದು ನಮ್ಮ ರಕ್ತದಲ್ಲೇ ಇದೆ. ಹಿಂದುತ್ವ ಬಿಜೆಪಿ ಸ್ವತ್ತಲ್ಲ. ಗಾಂಧಿ ಕೊಂದ ಗೋಡ್ಸೆ ಅನುಯಾಯಿ ಯೋಗಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಉಡುಪಿಯಲ್ಲಿ ಸೋಮವಾರ ಗುಡುಗಿದ್ದಾರೆ. ಅವರು ಹೇಳಿದ್ದಿಷ್ಟು: 'ಸಿದ್ದರಾಮಯ್ಯ ಹಿಂದೂವಾದರೆ ಗೋಹತ್ಯೆ ನಿಷೇಧ ಮಾಡಲಿ ಎನ್ನುವ ಆದಿತ್ಯನಾಥರು ಒಮ್ಮೆ ಸ್ವಾಮಿ ವಿವೇಕಾನಂದರ...
ಡಿಜಿಟಲ್ ಕನ್ನಡ ವಿಶೇಷ: ಮೂರು ತಿಂಗಳ ಹಿಂದೆ ರಾಜ್ಯ ಮುಖಂಡರಿಗೆ ಪಾಠ ಮಾಡಲು ಬಂದಿದ್ದ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದಿಚುಂಚನಗಿರಿ ಶ್ರೀ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದ್ದರು. ಇದೀಗ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಈ ಎರಡೂ ಭೇಟಿಗಳ ಹಿಂದೆ ನಿರ್ಮಲಾನಂದ ಶ್ರೀಗಳು ಪ್ರತಿನಿಧಿಸುವ ರಾಜ್ಯದ ಎರಡನೇ ಪ್ರಬಲ ಸಮುದಾಯ ಒಕ್ಕಲಿಗರ ಮತ ಸೆಳೆವ ತಂತ್ರ ಅಡಗಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಜಾತಿ, ಪ್ರಾಂತ್ಯ,...
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಕಾಶಬುಟ್ಟಿ’ ಆಗಿದ್ದಾರೆ! ನಿಜ, ಕರ್ನಾಟಕ ವಿಧಾನಸಭೆ ಚುನಚಾವಣೆಗೆ ಐದು ತಿಂಗಳು ಮಾತ್ರ ಬಾಕಿ ಉಳಿದಿರುವಾಗ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿರುವುದು ಅವರನ್ನು ಆಕಾಶದಲ್ಲಿ ತೇಲಿಸುತ್ತಿದೆ. ಈ ಕ್ಷಣಕ್ಕೆ ಅನ್ವಯ ಆಗುವ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರವುದು ಇಲ್ಲವೇ ಅಧಿಕಾರಕ್ಕೆ ಸಮೀಪವಿರುವುದು ಪ್ರತಿಬಿಂಬಿತವಾಗಿದೆ. ಇದು ಸಹಜವಾಗಿಯೇ ಕಾಂಗ್ರೆಸ್ ಸರಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರಿಗೆ ಹತ್ತು ತಲೆ, ಇಪ್ಪತ್ತು ಭುಜ ತಂದಿದೆ. ವಿಶ್ವವಾಣಿ, ಕನ್ನಡಪ್ರಭ ದೈನಿಕ, ಸುವರ್ಣ ಟಿವಿ, ಪಬ್ಲಿಕ್ ಟಿವಿ, ಬಿಟಿವಿ, ಟಿವಿ 9...
ಡಿಜಿಟಲ್ ಕನ್ನಡ ಟೀಮ್: 'ಬೇರೆ ಧರ್ಮದವರನ್ನು ದ್ವೇಷಿಸುವುದು, ಹಿಂದೂಗಳನ್ನು ಬೇರೆ ಧರ್ಮದವರ ವಿರುದ್ಧ ಎತ್ತಿ ಕಟ್ಟುವಮೂಲಕ ಬಿಜೆಪಿ ಕೋಮುವಾದಿಗಳ ಏಜೆಂಟ್ ಆಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ  ನಡೆಸಿದ್ದಾರೆ. 'ನಾವು ಎಲ್ಲ ಧರ್ಮ, ಜಾತಿಯವರನ್ನು ಪ್ರೀತಿಸಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಆದ್ರೆ ಬಿಜೆಪಿಯವರು ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ. ಮಂಗಳೂರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ' ಎಂದು ಪುತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಹೇಳಿದರು. ಸಂವಿಧಾನ...
ಡಿಜಿಟಲ್ ಕನ್ನಡ ಟೀಮ್: 'ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನಗಳ ನೆನಪಾಗಿತ್ತು. ಅದೇ ರೀತಿ ಈಗ ಕರ್ನಾಟಕ ಸಿಎಂ ಸಿದ್ರಾಮಯ್ಯ ಅವರು ತಾವೊಬ್ಬ ಹಿಂದೂ ಎಂದು ಹೇಳುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಶಕ್ತಿ ನೋಡಿ ಹಿಂದುತ್ವದ ನೆನಪಾಗಿದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ಕಾಂಗ್ರೆಸ್ ಮುಖಂಡರನ್ನು ಹುರಿದು ಮುಕ್ಕಿದರು. ಆ ಪಕ್ಷದ ಒಂದೊಂದೇ ನಡೆಯನ್ನು ಮನಬಂದಂತೆ ಛೇಡಿಸಿದರು. ಆ ಪರಿ ಹೀಗಿತ್ತು: 'ಹಿಂದೂಗಳ ಶಕ್ತಿ ನೋಡಿಯೇ ರಾಹುಲ್ ಗಾಂಧಿ...
ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ವಿಐಪಿ ಸಂಸ್ಕೃತಿಯನ್ನು ಹಂತ ಹಂತವಾಗಿ ತಗ್ಗಿಸಲು ಈಗಾಗಲೇ ರಾಜಕೀಯ ನಾಯಕರ ಕಾರಿನ ಮೇಲಿದ್ದ ಕಂಪು ದೀಪಗಳನ್ನು ಕಿತ್ತು ಬಿಸಾಕಿದ್ದಾಯ್ತು. ಈಗ ಅದರ ಮುಂದುವರಿದ ಭಾಗವಾಗಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಕಾರುಗಳಿಗೆ ನಂಬರ್ ಪ್ಲೇಟ್ ಬರಲಿದೆ. ಇಷ್ಟು ದಿನಗಳ ಕಾಲ ಈ ಉನ್ನತ ಹುದ್ದೆ ಅಲಂಕರಿಸಿದವರು ಹಾಗೂ ವಿದೇಶಾಂಗ ಸಚಿವಾಲಯದಿಂದ ವಿದೇಶಿ ಅಧಿಕಾರಿಗಳ ಸಂಚಾರಕ್ಕೆ ನೀಡುವ ವಾಹನಗಳಲ್ಲಿ ನಂಬರ್ ಪ್ಲೇಟ್ ಬಳಸದೇ ಕೇವಲ ಅಶೋಕ ಸ್ತಂಭವನ್ನು ಬಳಸಲಾಗುತ್ತಿತ್ತು. ಈಗ ದೆಹಲಿ ಹೈ ಕೋರ್ಟ್ ಆದೇಶದ ಮೇರೆಗೆ ಈ ವಾಹನಗಳ...
ಸಂಗ್ರಹ ಚಿತ್ರ ಡಿಜಿಟಲ್ ಕನ್ನಡ ಟೀಮ್: ಮಾನವ ಸಂಪನ್ಮೂಲ ಇಲಾಖೆ ಆಧಾರ್ ಸಲ್ಲಿಕೆಯಿಂದ ನಿರ್ಧಾರದಿಂದ ದೇಶದಲ್ಲಿ 80 ಸಾವಿರ ಶಿಕ್ಷಕರ ಮೋಸ ಬಯಲಾಗಿದೆ. ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರದಿಂದ ಕೇಂದ್ರ ಸರ್ಕಾರ ಅಡುಗೆ ಅನಿಲ ಸಬ್ಸಿಡಿ, ಪಡಿತರ ಚೀಟಿ ಸೇರಿದಂತೆ ಇತರೆ ವಿಭಾಗಗಳಲ್ಲಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸರ್ಕಾರದ ಸಂಪನ್ಮೂಲ ಸೋರಿಕೆಯನ್ನು ತಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಇದರ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. 2016-17ನೇ ಸಾಲಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಉನ್ನತ ಶಿಕ್ಷಣ ಸಮೀಕ್ಷೆಯಲ್ಲಿ ಎಲ್ಲಾ ಶಿಕ್ಷಕರಿಗೂ ಆಧಾರ್ ಕಡ್ಡಾಯ...
ಮೇವು ಹಗರಣದ ಅಪರಾಧ ಸಾಬೀತಾಗಿದ್ದ ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರೂವರೇ ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಲಕ್ಷ ರುಪಾಯಿ ದಂಡ ವಿಧಿಸಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ (ಪಿಸಿಎ) ಅನ್ವಯ ಲಾಲೂ ಪ್ರಸಾದ್ ಅವರಿಗೆ ತಲಾ ಐದು ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲವಾದಲ್ಲಿ ಇನ್ನಾರು ತಿಂಗಳ ಜೈಲು ಶಿಕ್ಷೆಅನುಭವಿಸಬೇಕು ಎಂದು ಸಿಬಿಐ ನ್ಯಾಯಮೂರ್ತಿಗಳಾದ ಶಿವರಾಜ್ ಪಾಲ್ ಸಿಂಗ್ ಆದೇಶಿಸಿದರು. ಮೇವು ಹಗರಣದ ಎರಡನೇ...
ಡಿಜಿಟಲ್ ಕನ್ನಡ ಟೀಮ್: ಎಚ್ 1ಬಿ ವೀಸಾ ನೀತಿ ಮತ್ತಷ್ಟು ಬಿಗಿಗೊಳಿಸುವ ಟ್ರಂಪ್ ನಿರ್ಧಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜತೆಗೆ ಲಕ್ಷಾಂತರ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇನ್ನು ಪ್ರಸ್ತಾವನೆ ಹಂತದಲ್ಲಿರುವ ನೂತನ ವೀಸಾ ನೀತಿ ಬಗ್ಗೆ ಅಮೆರಿಕ ನಾಯಕರೇ ಅಪಸ್ವರ ಎತ್ತುತ್ತಿದ್ದಾರೆ. ಅದಕ್ಕೆ ಕಾರಣ ವೀಸಾ ನೀತಿ ಭಾರತಕ್ಕಿಂತ ಅಮೆರಿಕಕ್ಕೆ ಹೆಚ್ಚು ಹೊಡೆತ ಬೀಳುತ್ತದೆ ಎಂದು ಡೆಮಕ್ರಾಟಿಕ್ ಸಂಸತ್ ಸದಸ್ಯೆ ತುಳಸಿ ಗಬರ್ಡ್ ಹಾಗೂ ನಾಸ್ಕಾಮ್ ಮುಖ್ಯಸ್ಥ ಆರ್.ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಆಡಳಿತದ ಈ ನಿರ್ಧಾರ ವಿದೇಶಿಯರಿಗೆ ಉದ್ಯೋಗ ಅವಕಾಶ ಕಡಿಮೆ ಮಾಡಿ ಮೂಲ ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗ...
ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತೀಯ ದ್ವೇಷದ ಹತ್ಯೆ ನಿಯಂತ್ರಿಸಲು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಎಸ್ ಡಿಪಿಐ, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು ವರದಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವಿಚಾರವಾಗಿ ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಹೇಳಿದಿಷ್ಟು... 'ಪಿಎಫ್ಐ, ಬಜರಂಗದಳ, ಶ್ರೀರಾಮಸೇನೆ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಮತೀಯ ಗಲಭೆಗಳಿಗೆ ಕಾರಣವಾಗಿರುವ ಎಲ್ಲಾ ಕೋಮು ಸಂಘಟನೆಗಳನ್ನು ನಿಷೇಧಿಸುವುದೂ ಹಾಗೂ ಇತರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳನ್ನು...
ಡಿಜಿಟಲ್ ಕನ್ನಡ ಟೀಮ್: ಡಿ.ಕೆ. ಶಿವಕುಮಾರ್ ಗೆ ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಬಂದು ಸ್ಪರ್ಧಿಸಲಿ. ಅವರೆದರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಸೋಲಿಸುತ್ತೇನೆ ಎಂದು ಶಾಸಕ ಸಿ.ಪಿ. ಯೋಗೀಶ್ವರ್ ಪಂಥಾಹ್ವಾನ ನೀಡುವುದರೊಂದಿಗೆ ಅವರ ಮತ್ತು ಡಿ.ಕೆ. ಸಹೋದರರ ನಡುವಣ ವಿರಸ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಸಹೋದರರು ಚನ್ನಪಟ್ಟಣಕ್ಕೆ ಬಾಡಿಗೆ ಜನರನ್ನು ಕರೆಸಿಕೊಂಡು ನನ್ನ ವಿರುದ್ಧ ದ್ವೇಷ ಕಾರಿದ್ದಾರೆ. ಆ ಮೂಲಕ ಹತಾಶೆ ಪ್ರದರ್ಶಿಸಿದ್ದಾರೆ. ನನ್ನನ್ನು ಹೆದರಿಸುವ, ಕಟ್ಟಿ ಹಾಕುವ ಅವರ ಯಾವುದೇ ಪ್ರಯತ್ನ ಫಲ ನೀಡುವುದಿಲ್ಲ. ಅವರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ...
ಡಿಜಿಟಲ್ ಕನ್ನಡ ಟೀಮ್: ಮೇವು ಹಗರಣದಲ್ಲಿ ಜೈಲು ಸೇರಿದ್ದರೂ ಲಾಲು ಪ್ರಸಾದ್ ಯಾದವ್ ಗೆ ಬುದ್ಧಿ ಬಂದಿಲ್ಲ. ಸುಖಾಸುಮ್ಮನೆ ಜಡ್ಜ್ ಅವರನ್ನು ಕೆಣಕಿ, ಜೈಲಲ್ಲಿ ತಬಲ ಬಾರಿಸುವಂತೆ ತಿರುಗೇಟು ತಿಂದಿದ್ದಾರೆ. ನ್ಯಾಯಾಯಾಧೀಶರು ಈ ಸಲಹೆ ಕೊಡಲು ಕಾರಣ ಲಾಲು ಪ್ರಸಾದ್ ಅವರ ಹಾಸ್ಯ. ಲಾಲು ಹೇಳಿ ಕೇಳಿ ಹಾಸ್ಯಪಜ್ಞೆ ಇರುವ ವ್ಯಕ್ತಿ. ಅನೇಕ ಬಾರಿ ಸಂಸತ್ತಿನಲ್ಲಿ, ಮಾಧ್ಯಮಗಳ ಮುಂದೆ ತಮ್ಮ ಒನ್ ಲೈನ್ ಹಾಸ್ಯಗಳೊಂದಿಗೆ ಸಾಕಷ್ಟು ಸುದ್ದಿಯಾದವರು. ಅದೇ ರೀತಿ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣೆ ವೇಳೆ ಲಾಲು 'ಜೈಲಲ್ಲಿ ತುಂಬಾ ಚಳಿ ಇದೆ' ಅಂತ ನ್ಯಾಯಾಧೀಶರ ಮುಂದೆ...
ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆ ಇದೇ ಮೊದಲ ಬಾರಿಗೆ ಕಾಡುತ್ತಿಲ್ಲ. ಎಂಎಂ ಕಲಬುರಗಿ ಹತ್ಯೆಯಿಂದ ಹಿಡಿದು ಗೌರಿ ಲಂಕೇಶ್ ಹತ್ಯೆವರೆಗು ಮತ್ತು ಕಳೆದ ವಿಜಯಪುರದಲ್ಲಿ ಅತ್ಯಾಚಾರ ಹಾಗೂ ಕೊಲೆಯಾದ ದಾನಮ್ಮನಿಂದ ಸರಣಿ ಹಿಂದೂ ಕಾರ್ಯಕರ್ತರ ಹತ್ಯೆವರೆಗೂ ಪ್ರತಿ ಪ್ರಕರಣದಲ್ಲಿ ಈ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇದೆ. ರಾಜ್ಯದಲ್ಲಿ ಪ್ರತಿ ಬಾರಿ ಇಂತಹ ಪ್ರಕರಣಗಳು ನಡೆದಾಗ ಆರಂಭದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನೆ ಬರುತ್ತದೆಯಾದರೂ ನಂತರ ಪ್ರತಿ ಪ್ರಕರಣಗಳು ರಾಜಕೀಯ ಬಣ್ಣ ಪಡೆದು ಪಕ್ಷಗಳ ನಡುವಣ ಸಮರಕ್ಕೆ...
ಡಿಜಿಟಲ್ ಕನ್ನಡ ಟೀಮ್: ಚನ್ನಪಟ್ಟಣದ ಹತ್ತಾರು ಕೆರೆಗಳಿಗೆ ನೀರು ತುಂಬಿಸಿ 'ಆಧುನಿಕ ಭಗಿರಥ' ಎನಿಸಿರುವ ಶಾಸಕ ಸಿ.ಪಿ. ಯೋಗೀಶ್ವರ್ ಅವರಿಗೆ ಏಳು ಕೆರೆ ನೀರು ಕುಡಿಸಲು ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಸಹೋದರ ಡಿ.ಕೆ. ಸುರೇಶ್ ತೊಡೆ ತಟ್ಟಿ ನಿಂತಿದ್ದಾರೆ. ಚುನಾವಣೆಗೊಂದು ಪಕ್ಷ ಬದಲಿಸುತ್ತಾ, ಅದನ್ನೇ ರಾಜಕೀಯ ಏಳ್ಗೆಗೆ ಸೋಪಾನ ಮಾಡಿಕೊಂಡಿರುವ ಯೋಗೀಶ್ವರ್ ತಂತ್ರಗಾರಿಕೆಯನ್ನೇ ಅವರಿಗೆ ಮುಳುಗು ನೀರು ಮಾಡಲು ಡಿ.ಕೆ. ಸಹೋದರರು ಪ್ರತಿತಂತ್ರ ಹೆಣೆದಿದ್ದು, ತಮ್ಮ ಕಡುವಿರೋಧಿ ಬಗ್ಗುಬಡಿಯಲು ಮತ್ತೊಬ್ಬ ಕಡುವಿರೋಧಿ ದೇವೇಗೌಡರ ಕುಟುಂಬದ ಜತೆ 'ಕೈ' ಮಿಲಾಯಿಸಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಲಿರುವ ಮಾಜಿ...
ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರರ ವಿಷಯವಾಗಿ ಪಾಕಿಸ್ತಾನದ ವಿರುದ್ಧ ಗುಡುಗುತ್ತಿರೋದು ಗೊತ್ತೇ ಇದೆ. ಆದರೆ ಟ್ರಂಪ್ ಸದ್ದಿಲ್ಲದೇ ಭಾರತಕ್ಕೂ ಗುನ್ನಾ ಕೊಡುತ್ತಿರೋದು ಎಷ್ಟೋ ಜನರಿಗೆ ಗೊತ್ತೇ ಆಗುತ್ತಿಲ್ಲ. ಹೌದು, ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ 'ಬಯ್ ಅಮೆರಿಕನ್, ಹೈರ್ ಅಮೆರಿಕನ್' (ಅಮೆರಿಕ ವಸ್ತು ಕೊಳ್ಳಿ, ಅಮೆರಿಕನ್ನರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ) ಎಂದು ಸೂತ್ರ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಅದರ ಭಾಗವಾಗಿ ಎಚ್-1ಬಿ ವಿಸಾಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಟ್ರಂಪ್ ಅವರ ಈ ನೂತನ ವೀಸಾ ನೀತಿ ಅಮೆರಿಕದಲ್ಲಿರುವ ವಿದೇಶಿಗರಿಗೆ...
ಪ್ರಧಾನಿ ನರೇಂದ್ರ ಮೋದಿ ಅವರು ಬಹುದೊಡ್ಡ ಸ್ವಾರ್ಥಿ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಮಹಾನ್ ಪಕ್ಷಪಾತಿ ಎಂದು ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ ಅಂಬರೀಶ್ ಗುಡುಗಿದ್ದಾರೆ. ಕರ್ನಾಟಕದವರೇನೂ ಭಾರತೀಯರಲ್ವಾ? ಅವರ ಸಮಸ್ಯೆ ದೇಶದ ಸಮಸ್ಯೆ ಅಲ್ವಾ? ಪ್ರಧಾನಿಯವರ ಕಣ್ಣಿಗೆ ಅದೇಕೆ ಬೀಳುತ್ತಿಲ್ಲ. ಅವರು ಸ್ವಾರ್ಥ ಬಿಟ್ಟರೆ ಒಂದೇ ಕ್ಷಣದಲ್ಲಿ ಮಹದಾಯಿ ಸಮಸ್ಯೆ ಬಗೆಹರಿದು ಹೋಗುತ್ತದೆ ಎಂದು ಬಹುದಿನಗಳ ನಂತರ ವಿಧಾನಸೌಧಕ್ಕೆ ಮಂಗಳವಾರ ಭೇಟಿ ನೀಡಿದ್ದ ಅಂಬರೀಶ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ಪ್ರಕೃತಿಯ ವಿಕೋಪವಾದಾಗ ಮೋದಿ ಭೇಟಿ ನೀಡಿ, ನಾನಿದ್ದೇನೆ ಅಂಥ ಭರವಸೆ...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

16,452FansLike
170FollowersFollow
69SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ