Tuesday, April 20, 2021
Home Tags Pakistan

Tag: Pakistan

ಜನರಲ್ ಕ್ವಮರ್ ಜಾವೇದ್ ಬಾಜ್ವಾ ಪಾಕ್ ಸೇನೆಯ ನೂತನ ಮುಖ್ಯಸ್ಥ, ಮತಾಂಧತೆ ಪಾಕಿಸ್ತಾನಕ್ಕೇ ಹೆಚ್ಚು...

ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಗೆ ನಿರೀಕ್ಷೆಯಂತೆ ಅವಧಿ ವಿಸ್ತರಣೆ ಆಗಿಲ್ಲ. ಪ್ರಧಾನಿ ನವಾಜ್ ಷರೀಫ್ ಇಂಥದೊಂದು ನಿರ್ಣಯಕ್ಕೇ ಬರಲಿದ್ದಾರೆಂದು ಈ ಹಿಂದೆಯೇ ವಿಶ್ಲೇಷಣೆಗಳಾಗಿದ್ದವು. ಪಾಕಿಸ್ತಾನದ ಪ್ರಮುಖ ದೈನಿಕ ಡಾನ್ ವರದಿಯ ಪ್ರಕಾರ...

ಸೈನಿಕರ ಶಿರಚ್ಛೇಧನಕ್ಕೆ ಪ್ರತಿಯಾಗಿ ಗಡಿಯಲ್ಲಿ ಪಾಕ್ ವಿರುದ್ಧ ದಾಳಿ ಬಿರುಸಾಗಿಸಿದ ಭಾರತ

ಡಿಜಿಟಲ್ ಕನ್ನಡ ಟೀಮ್: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಹಾಗೂ ಉಗ್ರರ ಉಪಟಳದಿಂದ ಬೇಸತ್ತಿರುವ ಭಾರತೀಯ ಸೇನೆ ಈಗ ಎದುರಾಳಿಗಳಿಗೆ ತಕ್ಕ ಶಾಸ್ತಿ ಮಾಡುತ್ತಿದೆ. ನಿನ್ನೆ ಓರ್ವ ಸೈನಿಕನ ಶಿರಚ್ಛೇಧ ಸೇರಿದಂತೆ ಮೂವರು...

ಗಡಿ ಪ್ರದೇಶದಲ್ಲಿ ಮತ್ತೆ ಬಾಲ ಬಿಚ್ಚುತ್ತಿದೆ ಪಾಕಿಸ್ತಾನ, ಚೀನಾ ಜತೆಗಿನ ಮಿಲಿಟರಿ ದೋಸ್ತಿಯನ್ನು ತೆರೆದಿಟ್ಟಿತು...

ಡಿಜಿಟಲ್ ಕನ್ನಡ ಟೀಮ್: ಸದ್ಯ ದೇಶದ ಜನತೆ ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದರೆ, ಅತ್ತ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಬಾಲ ಬಿಚ್ಚುತ್ತಿದೆ. ಭಾರತೀಯ ಸೇನೆ ಮೇಲೆ ದಾಳಿ ಮಾಡುವುದು...

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕರಾಳ ದಿನಾಚರಣೆ, ಹುಳುಕು ಮುಚ್ಚಿಕೊಳ್ಳಲು ಬಲಪ್ರಯೋಗಿಸಿತು ಪಾಕ್ ಸೇನೆ, ಭಾರತದತ್ತ...

ಡಿಜಿಟಲ್ ಕನ್ನಡ ಟೀಮ್: ಅದು 1947ರ ಅಕ್ಟೋಬರ್ 22. ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿ ಬುಡಕಟ್ಟು ಜನರನ್ನು ಕಾಶ್ಮೀರದ ಮೇಲೆ ದಾಳಿ ಮಾಡುವಂತೆ ಮಾಡಿ ಆ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಪಾಕಿಸ್ತಾನದ ಈ...

ಭಾರತ ರಕ್ಷಣಾ ಮಾಹಿತಿ ಸೋರಿಕೆ ಆರೋಪದಲ್ಲಿ ಪಾಕ್ ಹೈ ಕಮಿಷನ್ ಕಚೇರಿ ಸಿಬ್ಬಂದಿ ಬಂಧನ,...

ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಬಂಧಿತರಾಗಿರುವ ಪಾಕ್ ಹೈ ಕಮಿಷನ್ ಕಚೇರಿ ಸಿಬ್ಬಂದಿ ಮೌಲಾನಾ ರಂಜಾನ್ ಮತ್ತು ಸುಭಾಷ್ ಜಾಂಗ್ರಿ. ಡಿಜಿಟಲ್ ಕನ್ನಡ ಟೀಮ್: ಭಾರತದಿಂದ ರಕ್ಷಣಾ ಹಾಗೂ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು...

ಪಾಕಿಸ್ತಾನವೂ ಉಗ್ರವಾದ ಸಂತ್ರಸ್ತವೆಂದು ಬಿಂಬಿಸುವುದಕ್ಕೆ ಬಲೊಚಿಗಳನ್ನೇಕೆ ಕೊಲ್ಲುತ್ತೀರಿ?: ಕ್ವೆಟ್ಟಾದಲ್ಲಿ 60 ಬಲಿ ಪಡೆದ ಉಗ್ರದಾಳಿಗೆ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತು ಕೇಂದ್ರದ ಮೇಲೆ ದಾಳಿ ಮಾಡಿರುವ ಉಗ್ರರು 60 ಮಂದಿಯನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದಾರೆ. ಸೋಮವಾರ ತಡರಾತ್ರಿ ತರಬೇತಿನ ಹುಡುಗರು ಮಲಗಿದ್ದ ವೇಳೆಯಲ್ಲಿ ನಡೆದ ದಾಳಿ...

‘ನಮ್ಮ ಸೈನಿಕರನ್ನು ಮುಟ್ಟಿದ್ರೆ ದುಬಾರಿ ಬೆಲೆ ತೆರಬೇಕಾಗುತ್ತೆ ಹುಷಾರ್!’ ಎಂದಿದೆ ಬಿಎಸ್ಎಫ್, ಮಗ ಹುತಾತ್ಮನಾಗಿದ್ದಕ್ಕೆ...

ಹುತಾತ್ಮ ಯೋಧ ಗುರ್ನಾಮ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಗಡಿ ಭದ್ರತಾ ಸಿಬ್ಬಂದಿ... ಡಿಜಿಟಲ್ ಕನ್ನಡ ಟೀಮ್: ಎರಡು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಹಿರಾನಗರ್ ಗಡಿ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 7...

‘ಉಗ್ರರ ವಿರುದ್ಧ ನೀವು ಹೋರಾಡದಿದ್ರೆ, ಆ ಕೆಲಸ ನಾವು ಮಾಡ್ತೇವೆ’ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ‘ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆ ಐಎಸ್ಐ ತನ್ನ ನೆಲದಲ್ಲಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನ ಉಗ್ರರ ವಿರುದ್ಧ ಸರಿಯಾಗಿ ಹೋರಾಟ ನಡೆಸದಿದ್ರೆ, ಆ ಕೆಲಸವನ್ನು...

ಜಮ್ಮುವಿನಲ್ಲಿ ಪಾಕ್ ಗೂಢಚಾರಿ ಬೋಧ್ ರಾಜ್ ಬಂಧನ, ನಾಲ್ಕು ವರ್ಷದಲ್ಲಿ ಬಂಧಿತರಾದ ಪಾಕಿಗಳ ಪೈಕಿ...

ಡಿಜಿಟಲ್ ಕನ್ನಡ ಟೀಮ್: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಪೊಲೀಸರು ಪಾಕಿಸ್ತಾನದ ಪರ ಗೂಢಚಾರಿಯಾಗಿ ಕೆಲಸ ಮಾಡುತ್ತಿದ್ದ ಬೋಧ್ ರಾಜ್ ಎಂಬಾತನನ್ನು ಶನಿವಾರ ಬಂಧಿಸಿದ್ದಾರೆ... ಭಾರತದಲ್ಲಿ ಏನಾಗುತ್ತಿದೆ, ಗಡಿ ಪ್ರದೇಶಗಳಲ್ಲಿ ಯಾವ ರೀತಿ ಸೈನಿಕರನ್ನು ನಿಯೋಜಿಸಿದೆ,...

‘ಉಗ್ರರ ತಾಯ್ನಾಡು ನಮ್ಮ ನೆರೆ ರಾಷ್ಟ್ರವಾಗಿರೋದು ದುರಾದೃಷ್ಟಕರ’ ಎಂದ ಮೋದಿ, ಬ್ರಿಕ್ಸ್ ವೇದಿಕೆಯಲ್ಲೂ ಮುಂದುವರಿದ...

ಡಿಜಿಟಲ್ ಕನ್ನಡ ಟೀಮ್: ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲಿನ ದಾಳಿ ನಂತರ, ಇನ್ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನವನ್ನು ಯಾವುದೇ ಹಂತದಲ್ಲೂ ಸಹಿಸುವುದಿಲ್ಲ ಎಂಬ ಮನಸ್ಥಿತಿಗೆ ಬಂದು ಬಿಟ್ಟಿದೆ. ಪರಿಣಾಮ ತನಗೆ ಸಿಕ್ಕ ಪ್ರತಿಯೊಂದು...

ಭಾರತದ ವಿರುದ್ಧ ಯುದ್ಧಕ್ಕೆ ಮುಜಾಹಿದೀನ್ ಗಳಿಗೆ ಅನುಮತಿ ಕೊಡಿ ಅಂತ ಪಾಕ್ ಸರ್ಕಾರವನ್ನು ಕೇಳಿದ್ದಾನೆ...

ಡಿಜಿಟಲ್ ಕನ್ನಡ ಟೀಮ್: ಭಾರತದ ವಿರುದ್ಧ ದೂರು ಹೊತ್ತೊಯ್ದಾಗಲೆಲ್ಲ ಪಾಕಿಸ್ತಾನಕ್ಕೆ ಅಮೆರಿಕದ ಬಳಿ ಸಾಂತ್ವನ ಲಭಿಸುತ್ತಿತ್ತು. ಇದೀಗ ಪರಿಸ್ಥಿತಿ ಬದಲಾಗಿದೆ ಎಂಬುದಕ್ಕೆ ಅಮೆರಿಕದಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿ. ಇತ್ತೀಚಿನ ಬೆಳವಣಿಗೆಯಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಹೇಳಿರುವ ಮಾತು-...

ಮಸೂದ್ ಅಜರ್, ಎನ್ಎಸ್ಜಿ, ಗಡಿ ಭದ್ರತೆ… ಎಲ್ಲದರಲ್ಲೂ ಭಾರತಕ್ಕೆ ಚೀನಾ ತೊಡರುಗಾಲು

ಉಗ್ರ ಮಸೂದ್ ಅಜರ್ ಡಿಜಿಟಲ್ ಕನ್ನಡ ಟೀಮ್: ಜೈಷೆ ಉಗ್ರ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿ ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲಾಗಿದೆ ಚೀನಾ. ಇದೇನೂ ಹೊಸ ವಿದ್ಯಮಾನವಲ್ಲ. ಮೊದಲಿನಿಂದಲೂ ತಾಂತ್ರಿಕ ಕಾರಣಗಳನ್ನು ಹೇಳಿ...

ಭಾರತದ ಮಿಲಿಟರಿ-ಡಿಪ್ಲೊಮಸಿ ಹೊಡೆತಕ್ಕೆ ಪಾಕ್ ಸರ್ಕಾರ ಮತ್ತು ಸೇನೆಯ ನಡುವೆಯೇ ಶುರುವಾಗಿದೆ ಮುಸುಕಿನ ಗುದ್ದಾಟ,...

ಡಿಜಿಟಲ್ ಕನ್ನಡ ಟೀಮ್: ತಾನು ಅಂತಾರಾಷ್ಟ್ರೀಯವಾಗಿ ಏಕಾಂಗಿಯಾಗುತ್ತಿರುವುದು ಹೌದು ಅಂತ ಪಾಕಿಸ್ತಾನವೇ ಒಪ್ಪಿಕೊಂಡು ತಲ್ಲಣಿಸಿರುವುದರ ಚಿತ್ರಣವಿದು. ಪಾಕಿಸ್ತಾನದ ಮುಖ್ಯ ಮಾಧ್ಯಮವಾದ 'ಡಾನ್' ವರದಿಯ ಪ್ರಕಾರ, ಪಾಕಿಸ್ತಾನದ ರಾಜಕೀಯ ನಾಯಕತ್ವವು ಉಗ್ರ ನಿಗ್ರಹಕ್ಕೆ ಸಂಬಂಧಿಸಿದಂತೆ ಮಿಲಿಟರಿ...

ಭಾರತೀಯ ಸೇನೆಯ ಪಿಒಕೆ ದಾಳಿಯ ವಿಡಿಯೋ ಸಲ್ಲಿಕೆಯಾಯ್ತು ಸರಿ, ಈ ಸಾಕ್ಷ್ಯ ಬಿಡುಗಡೆಯ ಅಪಾಯದ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಭಾರತೀಯ ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಗುರಿ ನಿರ್ದಿಷ್ಟ ದಾಳಿಯ ಖಚಿತತೆ ಹಾಗೂ ಸಾಕ್ಷ್ಯ ಬಿಡುಗಡೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆ ಎದ್ದಿದೆ....

ಪಾಕ್ ಪ್ರತಿದಾಳಿಗಳ ತೀವ್ರತೆ ಇನ್ನೆರಡು ತಿಂಗಳು ಅತಿ ತೀವ್ರ, ಇದು ಪಾಕ್ ಸೇನಾ ಮುಖ್ಯಸ್ಥನ...

ಡಿಜಿಟಲ್ ಕನ್ನಡ ವಿಶೇಷ: ಒಂದು ಕಡೆ ಭಾರತ-ಪಾಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಯತ್ನಿಸಿದೆ. ಇನ್ನೊಂದೆಡೆ ರಜೌರಿ- ಪೂಂಚ್ ಗಳಲ್ಲಿ ಪಾಕಿಸ್ತಾನದ ಕಡೆಯಿಂದ ಚಕಮಕಿ ವರದಿಯಾಗುತ್ತಲೇ ಇದೆ. ಬಾರಾಮುಲ್ಲಾದಲ್ಲಿ ಭಾನುವಾರ ದಾಳಿ...

ಮುಂದುವರಿದಿದೆ ಪಾಕ್ ಪರೋಕ್ಷ ಸಮರ, ಬಾರಾಮುಲ್ಲಾದಲ್ಲಿ ಬಿಎಸ್ಎಫ್ ಯೋಧ ಅಮರ, ಉರಿಯಂಥದೇ ಯೋಜಿತ ದಾಳಿಯ...

(ಪ್ರಾತಿನಿಧಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಭಾನುವಾರ ರಾತ್ರಿ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಸೈನಿಕ ಶಿಬಿರದ ಮೇಲಿನ ಉಗ್ರದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಭಾರತೀಯ ಪಡೆ ಯಶಸ್ವಿಯಾಗಿದೆಯಾದರೂ ದಾಳಿ ನಡೆಸಿದ ಉಗ್ರರು...

ನಾವು ಚಲನಚಿತ್ರ, ಮಾತುಕತೆ, ಕ್ರಿಕೆಟ್ ಅಂತ ಹಾಯಾಗಿರುವುದಾದರೆ ಭಾರತ- ಪಾಕ್ ಸಂಘರ್ಷವೇನು ಯೋಧರ ಖಾಸಗಿ...

  ಡಿಜಿಟಲ್ ಕನ್ನಡ ಟೀಮ್: ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರಿಗೆ ಮುಂಬೈನ ಕೆಲ ಸಂಸ್ಥೆಗಳು, ಪಕ್ಷಗಳು ಹೇರಿರುವ ನಿಷೇಧವನ್ನಿಟ್ಟುಕೊಂಡು ಬಾಲಿವುಡ್ ನ ಒಂದು ವರ್ಗ ಭಾರತಕ್ಕೆ ಸಹಿಷ್ಣುತೆಯ ಉಪದೇಶ ನೀಡುವುದಕ್ಕೆ ಶುರು...

ಭಾರತದ ಗುರಿ ನಿರ್ದಿಷ್ಟ ದಾಳಿಯ ಮರುದಿನದ ಚಿತ್ರಣವೇನು? ಚೀನಾ ಸೇರಿದಂತೆ ಯಾರೂ ಪಾಕ್ ಪರ...

ಡಿಜಿಟಲ್ ಕನ್ನಡ ಟೀಮ್: ಭಾರತದ ಅತ್ಯಂತ ಕಟ್ಟೆಚ್ಚರದ ಪರಿಣಾಮ, ಪಾಕಿಸ್ತಾನದಿಂದ ಯಾವುದೇ ಮರುಘಾತ ಸಾಧ್ಯವಾಗಿಲ್ಲ. ಆದರೆ ಗಡಿ ನಿಯಂತ್ರಣ ರೇಖೆಯ ಬಳಿ ಅಲ್ಲಲ್ಲಿ ಗುಂಡಿನ ಚಕಮಕಿ ವರದಿಯಾಗುತ್ತಿದೆ.  37 ರಾಷ್ಟ್ರೀಯ ರೈಫಲ್ಸ್ ಸೈನಿಕನೊಬ್ಬ ಎಲ್ಒಸಿಯನ್ನು ದಾಟಿದ್ದರಿಂದ...

ಸೇನಾಶೌರ್ಯ, ರಾಜಕೀಯ ಇಚ್ಛಾಶಕ್ತಿ, ಚಾಣಾಕ್ಷ್ಯತೆಯ ಸಂಗಮ – ಇದೇ ಪಾಕ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬಹಿರಂಗವಾದ...

  ಡಿಜಿಟಲ್ ಕನ್ನಡ ವಿಶೇಷ: 'ರಾಜಕಾರಣಿಗಳು ಮತ್ತು ನಾಗರಿಕರಂತೆ ಸೇನೆ ಮಾತಾಡುವುದಿಲ್ಲ. ತಮ್ಮ ಕಾರ್ಯದ ಮೂಲಕವೇ ಉತ್ತರ ಕೊಡುತ್ತವೆ' ಅಂತ ಪ್ರಧಾನಿ ನರೇಂದ್ರ ಮೋದಿ ಕೇರಳದ ಸಮಾವೇಶದಲ್ಲಿ ಹೇಳಿದ್ದರು. ಆ ಮೂಲಕ ಸೇನೆಗೆ ಈ ವಿಷಯದಲ್ಲಿ...

ಪಾಕಿಸ್ತಾನದ್ದು ಈಗಲೂ ಒಸಾಮಾನನ್ನು ಅಮೆರಿಕ ಹೊಡೆದಾಗ ತೋರಿದ ಎಡಬಿಡಂಗಿ ವರ್ತನೆಯೇ…

ಡಿಜಿಟಲ್ ಕನ್ನಡ ಟೀಮ್: 'ಭಾರತದ ಆಕ್ರಮಣಕಾರಿ ಧೋರಣೆ ಖಂಡಿಸುತ್ತೇವೆ. ಗಡಿ ಉಲ್ಲಂಘಿಸಿದ ದಾಳಿಯಿಂದ ನಮ್ಮ ಇಬ್ಬರು ಯೋಧರು ಮೃತರಾಗಿದ್ದಾರೆ' ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ ಬೆನ್ನಲ್ಲೇ, ಭಾರತ ಹೇಳುತ್ತಿರುವಂತೆ ಇದೇನೂ 'ನಿರ್ದಿಷ್ಟ...

ಒದೆಸಿಕೊಂಡ ಪಾಕಿಸ್ತಾನದ ಪ್ರತಿಕ್ರಿಯೆ ಹೇಗಿದೆ ನೋಡಿ… ನವಾಜ್ ಶರೀಫ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸೇನೆ ದಾಳಿ ಮಾಡಿರುವ ಬಗ್ಗೆ ಪಾಕಿಸ್ತಾನದಿಂದ ಮೊದಲ ಬಾರಿಗೆ ಪ್ರತಿಕ್ರಿಯೆ ಬಂದಿದೆ. ಭಾರತದ ಸೇನಾ ಕಾರ್ಯಾಚರಣೆಯನ್ನು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಖಂಡಿಸಿದ್ದು, ಈ...

ಈ ಬಾರಿ ಪಾಕಿಸ್ತಾನದಲ್ಲಾಗುವ ಸಾರ್ಕ್ ಸಭೆಗೆ ಭಾರತ ಹೋಗಲ್ಲ, ನಿರ್ಧಾರಕ್ಕೆ ಜತೆಯಾಗಿವೆ ಭೂತಾನ್-ಬಾಂಗ್ಲಾ, ಪಾಕ್-...

ಡಿಜಿಟಲ್ ಕನ್ನಡ ಟೀಮ್: ನವೆಂಬರ್ ನಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸುವುದಿಲ್ಲ ಎಂದು ಭಾರತ ಮಂಗಳವಾರ ಹೇಳಿದೆ. ‘ಈ ಪ್ರಾಂತ್ಯದಲ್ಲಿ ಹೆಚ್ಚಾಗುತ್ತಿರುವ ಗಡಾಚೆಗಿನ ಮೂಲದ ಉಗ್ರ ದಾಳಿಗಳು ಹಾಗೂ ದೇಶವೊಂದು ಇತರ ಸದಸ್ಯ...

ಅಂತೂ ಪಾಕಿಸ್ತಾನದ ಹಿಂದುಗಳಿಗೆ ಸಿಕ್ಕಿತು ವಿವಾಹ ಕಾಯ್ದೆ, ಆದರೆ ಬಲವಂತದ ಮದುವೆ-ಮತಾಂತರಗಳಿಗೆ ಇಲ್ಲ ತಡೆ

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದುಗಳಿಗೆ ಮದುವೆ ನೋಂದಣಿಗೆ ಅವಕಾಶ ಮಾಡಿಕೊಡುವ ಕಾನೂನೊಂದನ್ನು ಪಾಕಿಸ್ತಾನ ಸಂಸತ್ತು ಅನುಮೋದಿಸಿದೆ. ಇದೊಂದು ಐತಿಹಾಸಿಕ ನಡೆ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸುತ್ತಿವೆಯಾದರೂ ಕೆಲ ಮುಖ್ಯ ಆತಂಕಗಳನ್ನು...

ತೀರ ಎದೆ ತಟ್ಟಿಕೊಳ್ಳುವುದು ಬೇಡ, ಪಾಕಿಸ್ತಾನಕ್ಕೆ ಸಿಂಧು ಹರಿವನ್ನು ತಕ್ಷಣಕ್ಕೇ ನಿಲ್ಲಿಸಿಬಿಡಲು ಅದೇನು ನಲ್ಲಿಯಲ್ಲ…

ಡಿಜಿಟಲ್ ಕನ್ನಡ ವಿಶೇಷ: ನೀರು ಮತ್ತು ರಕ್ತ ಒಟ್ಟಿಗೇ ಹರಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆನ್ನಲಾದ ಮಾತನ್ನಿಟ್ಟುಕೊಂಡು ಹಲವರು ಪುಳಕ ಅನುಭವಿಸುತ್ತಿದ್ದಾರೆ. ಇಂಡಸ್ ನೀರು ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಪಾಠ...

ಕೇರಳದಲ್ಲಿ ಸಿಕ್ಕಿದ್ದು ಪಾಕಿಸ್ತಾನದ ರೋಚಕ ಖಳ ವಿವರಣೆ, ಮನ್ ಕೀ ಬಾತ್ ನಲ್ಲಿ ಹೊರಬಿದ್ದಿದೆ...

ಪ್ರವೀಣ್ ಕುಮಾರ್ ಉರಿ ಘಟನೆಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಸಾರ್ವಜನಿಕವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕು ಎಂಬುದು ದೇಶದ ಭಾವನೆಯಾಗಿತ್ತು. ಅದಕ್ಕೆ ಕಲ್ಲಿಕೋಟೆಯ ತಮ್ಮ ಭಾಷಣದಲ್ಲಿ ನೀರೆರೆದರು ಮೋದಿ. ಹಾಗೆ ನೋಡಿದರೆ ಇದು ಮಾತಾಡುವ ಕಾಲಘಟ್ಟವೇನಲ್ಲ. ಆದರೆ...

ಪಾಕಿಸ್ತಾನ ಮತ್ತು ಭಾರತಗಳೆರಡರ ಜತೆಯೂ ಜಂಟಿ ಸಮರಾಭ್ಯಾಸ, ಸಮತೋಲನ ಸಾಧನೆಗೆ ರಷ್ಯದ ಸರ್ಕಸ್ಸು

  (ಚಿತ್ರಕೃಪೆ- ಭಾರತೀಯ ಸೇನೆ ಟ್ವಿಟ್ಟರ್ ಖಾತೆ) ಚೈತನ್ಯ ಹೆಗಡೆ ಅಮೆರಿಕವನ್ನು ಆಲಂಗಿಸಿಕೊಳ್ಳುವ ಭರದಲ್ಲಿ ಭಾರತ ರಷ್ಯಾವನ್ನು ದೂರ ಮಾಡಿಕೊಳ್ಳುತ್ತಿದೆಯೇ ಎಂಬ ವಿಶ್ಲೇಷಣಾತ್ಮಕ ಲೇಖನದಲ್ಲಿ, ‘ಉರಿ ಘಟನೆ ಹಿನ್ನೆಲೆಯಲ್ಲಿ ರಷ್ಯವು ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ’ ಎಂದು...

ಭದ್ರತೆ, ಮಿಲಿಟರಿ ಕಾರ್ಯಾಚರಣೆಗಳ ಚರ್ಚೆಯ ನಡುವೊಂದು ಪ್ರಶ್ನೆ: ಇಂದಿರಾ ಯುಗದ ‘ರಾ’ ಗೂಢ ಕಾರ್ಯಾಚರಣೆಗಳ...

ರಾಮೇಶ್ವರನಾಥ ಕಾವೊ ನೇತೃತ್ವದಲ್ಲಿ ಶುರುವಾಗಿದ್ದು ಈ 'ರಾ'... ಡಿಜಿಟಲ್ ಕನ್ನಡ ವಿಶೇಷ: ಇದೀಗ ಪಾಕಿಸ್ತಾನದ ನೆಲದಿಂದ ಏಳುವ ಉಗ್ರವಾದದ ದಾಳಿಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂಬುದರಿಂದ ಹಿಡಿದು, ಪಾಕಿಸ್ತಾನದೊಳಗೆ ನುಗ್ಗಿ ಗುರಿಬದ್ಧ ಕಾರ್ಯಾಚರಣೆಗಳನ್ನು ಮಾಡಬೇಕು ಎಂಬುವವರೆಗೆ...

ಅಣ್ವಸ್ತ್ರ ಯೋಜನೆಗೆ ನಿಯಂತ್ರಣ… ಉಗ್ರ ರಾಷ್ಟ್ರ ಎಂಬ ಹಣೆಪಟ್ಟಿಗೆ ತಯಾರಿ… ಪಾಕಿಸ್ತಾನದ ಮೇಲೆ ಅಮೆರಿಕದ...

ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್... ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ಭಾರತದ ವಿರುದ್ಧ ಉಗ್ರರ ಮೂಲಕ ಸಮರ ಸಾರುತ್ತಿರುವ ಪಾಕಿಸ್ತಾನಕ್ಕೆ ಈಗ ಮೊದಲ ಬಾರಿಗೆ ದೊಡ್ಡ ಏಟು...

ಪಾಕಿಸ್ತಾನವನ್ನು ಮಣ್ಣಾಗಿಸುವ ಮಾತೇನೂ ಉತ್ಪ್ರೇಕ್ಷೆಯದ್ದಲ್ಲ, ಆದರೆ ದಾರಿಗಡ್ಡವಾಗಿ ಅತಿದೈತ್ಯ ಚೀನಾ ನಿಂತಿಹುದಲ್ಲ?

ಈಗ ಎಲ್ಲೆಲ್ಲೂ ಪಾಕಿಸ್ತಾನಕ್ಕೆ ಪಾಠ ಕಲಿಸುವ, ಪ್ರಹಾರ ನೀಡುವ ಮಾತು. ಆಗಬೇಕಾದದ್ದೇ. ಭಾರತವನ್ನು ನೇರ ಯುದ್ಧದಲ್ಲಿ ಗೆಲ್ಲಲಾಗದಾದ್ದರಿಂದ ಸಾವಿರ ಗಾಯಗಳಲ್ಲಿ ಅದರ ರಕ್ತ ಹರಸಿ ಬಳಲಿಸಬೇಕೆಂಬುದು ಪಾಕಿಸ್ತಾನದ ನೀತಿ. ಪಠಾನ್ಕೋಟ್, ಉರಿ ಹೀಗೆ...

ಪಾಕಿಸ್ತಾನದ ವಿರುದ್ಧ ಬಾಯ್ಮಾತಿನ ಪ್ರಹಾರಕ್ಕೆ ತೃಪ್ತನಲ್ಲ ಭಾರತೀಯ, ಹಾಗಾದರೆ ಮೋದಿ ಸರ್ಕಾರದ ಮುಂದಿರುವ ಆಯ್ಕೆಗಳೇನು?

ಡಿಜಿಟಲ್ ಕನ್ನಡ ವಿಶೇಷ: ಉರಿಯಲ್ಲಿ 17 ಭಾರತೀಯ ಯೋಧರನ್ನು ಹತ್ಯೆ ಮಾಡಿದ ಘಟನೆ ನಂತರ, ಪಾಕಿಸ್ತಾನದ ವಿರುದ್ಧ ಭಾರತ ಕೈಗೊಳ್ಳಲಿರುವ ಕ್ರಮಗಳೇನು ಎಂಬ ಬಗ್ಗೆ ದೇಶವೇ ಕದನ ಕಾತುರತೆಯಿಂದ ಕಾಯುತ್ತಿದೆ. ಮಾಧ್ಯಮ ಮತ್ತು ಸಾಮಾಜಿಕ...

ಪಾಕಿಸ್ತಾನದ ಮೇಲೆ ಭಾರತದ ಒತ್ತಡಕ್ಕೆ ಬಹು ಆಯಾಮ, ಮುಂಬೈ ದಾಳಿ ತನಿಖೆ ವಿಷಯದಲ್ಲೂ ಪತ್ರ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನ 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ತ್ವರಿತ ತನಿಖೆ ನಡೆಸಬೇಕು ಅಂತಾ ಹೇಳುತ್ತಿದ್ದ ಭಾರತ, ಈಗ ಈ ತನಿಖೆಯನ್ನು ಯಾವ ರೀತಿ ಚುರುಕುಗೊಳಿಸಬೇಕು ಎಂಬ ಸಲಹೆಗಳನ್ನು ನೀಡಿದೆ....

ಬಿರುಸಾಗುತ್ತಿದೆ ಪಾಕಿಸ್ತಾನದ ವಿರುದ್ಧ ಭಾರತದ ಬಲೊಚ್ ಪಂಚ್:  ಆಕಾಶವಾಣಿ ಸಹಯೋಗ, ಬಲೊಚ್ ಹೋರಾಟಗಾರರಿಗೆ ಆಶ್ರಯ,...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ವಿರುದ್ಧ ಭಾರತದ ರಾಜತಾಂತ್ರಿಕ ಸಮರ ಕಳೆಗಟ್ಟಿದೆ. ಒಂದು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡುತ್ತಲೇ ಇಂಥದೊಂದು ರಾಜತಾಂತ್ರಿಕ ಸಮರದ ಕುರುಕ್ಷೇತ್ರ ಬಲೊಚಿಸ್ತಾನವಾಗಲಿದೆ ಎಂಬುದರ ಸೂಚನೆ...

ಆಪ್ತವಾಗುತ್ತಿದ್ದಂತೆ ಭಾರತ-ಅಮೆರಿಕ ಆಲಿಂಗನ, ಅತ್ತ ಚೀನಾ-ಪಾಕ್-ರಷ್ಯ ಸಮೀಕರಣ… ಹೇಗಿರಲಿದೆ ಭವಿಷ್ಯದ ಕಂಪನ?

ಡಿಜಿಟಲ್ ಕನ್ನಡ ವಿಶೇಷ: ಇತ್ತ ಭಾರತವು ತನ್ನ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಅಮೆರಿಕದೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಂತೆ, ಅತ್ತ ಚೀನಾ-ಪಾಕಿಸ್ತಾನ-ರಷ್ಯಾ ಎಂಬ ಕಾರ್ಯತಂತ್ರ ಸಮೂಹವೊಂದು ರೂಪುಗೊಳ್ಳುತ್ತಿದೆಯಾ? ಜಾಗತಿಕ ರಾಜಕೀಯದಾಟದ ಹೊಸ ಕೌತುಕವಿದು. ಚೀನಾ- ಪಾಕಿಸ್ತಾನದ ಮಿತ್ರತ್ವ ಗೊತ್ತಿರುವುದೇ...

ವಾಘಾ ಗಡಿಯಲ್ಲಿ ಭಾರತದೊಂದಿಗೆ ವಹಿವಾಟಿಗೆ ಸಹಕರಿಸದಿದ್ದರೆ ನಿಮ್ಮ ಮಧ್ಯ ಏಷ್ಯ ಸಂಪರ್ಕ ತಪ್ಪಿಸುತ್ತೇವೆ: ಪಾಕಿಸ್ತಾನಕ್ಕೆ...

ಡಿಜಿಟಲ್ ಕನ್ನಡ ಟೀಮ್: ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಅವಕಾಶ ಮಾಡಿಕೊಡದಿದ್ದರೆ, ಮಧ್ಯ ಏಷ್ಯದ ಜತೆ ವ್ಯವಹರಿಸುವುದಕ್ಕೆ ಪಾಕಿಸ್ತಾನಕ್ಕೆ ಅನುಕೂಲ ಒದಗಿಸುತ್ತಿರುವ ಅಫ್ಘನ್ ಗಡಿಯನ್ನು ಮುಚ್ಚುತ್ತೇವೆ! –...

‘ಮುಂಬೈ ದಾಳಿಗೆ ಹೊಣೆ ಹೊತ್ತು ನ್ಯಾಯ ದೊರಕಿಸಿ…’ ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟ ಸೂಚನೆ!

ಡಿಜಿಟಲ್ ಕನ್ನಡ ಟೀಮ್: ‘ಮುಂಬೈ ದಾಳಿಗೆ ಹೊಣೆಗಾರಿಕೆ ಹೊತ್ತು ಪ್ರಕರಣಕ್ಕೆ ನ್ಯಾಯ ಒದಗಿಸಲೇ ಬೇಕು... ನಿಮ್ಮ ಆಶ್ರಯ ಪಡೆದು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲೇ ಬೇಕು... ಇಲ್ಲವಾದಲ್ಲಿ ನಮ್ಮಿಂದ...

ಪಾಕಿಸ್ತಾನದ ಪರಮ ಮಿತ್ರ ಚೀನಾದಲ್ಲಿ ನಿಂತು ಪಾಕ್ ನೆಲದ ಉಗ್ರವಾದದ ವಿರುದ್ಧ ಜಗತ್ತೇ ಒಂದಾಗಬೇಕಿದೆಯೆಂಬ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಪರಮಮಿತ್ರ ಚೀನಾದ ನೆಲದಲ್ಲೇ ನಿಂತು, ಪಾಕ್ ವಿರುದ್ಧ ಧ್ವನಿ ಎತ್ತುವುದರಲ್ಲಿ ಒಂದು ಸ್ಥೈರ್ಯ- ನೇರವಂತಿಕೆ ಇದೆ. ಜಿ 20 ಸಮಾರೋಪ ಸಂದರ್ಭದಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು...

ಪಾಕಿಸ್ತಾನಕ್ಕೆ ಮುಸ್ಲಿಮೇತರರು ಬೇಕಾಗಿಲ್ಲವೇನೋ… ಆದರೆ ವಕೀಲರೂ ಬೇಡವಾದರೆ? ಆತ್ಮಹತ್ಯಾ ಬಾಂಬ್ ದಾಳಿ: 18 ಸಾವು...

ಡಿಜಿಟಲ್ ಕನ್ನಡ ಟೀಮ್: ಧರ್ಮದ ಆಧಾರದಲ್ಲಿ ರೂಪುಗೊಂಡ ಪಾಕಿಸ್ತಾನಕ್ಕೆ ಮುಸ್ಲಿಮೇತರರು ಇದ್ದರೂ ಅಷ್ಟೆ, ಬಿಟ್ಟರೂ ಅಷ್ಟೆ ಅಂತಾಗಿರುವುದು ತಿಳಿದಿರುವ ವಿಷಯವೇ. ಆದರೆ ನ್ಯಾಯವಾದಿಗಳೂ ಬೇಕಾಗಿಲ್ಲವೇ? ಶುಕ್ರವಾರ ಅಲ್ಲಿನ ಎರಡು ಸ್ಥಳಗಳಲ್ಲಾದ ಆತ್ಮಹತ್ಯಾ ಬಾಂಬ್ ದಾಳಿಗಳು...

ಭಾರತ-ಅಮೆರಿಕ ದೋಸ್ತಿ ಪರ್ವ: ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರಕ್ಕೆ ಅಮೆರಿಕದಿಂದಲೇ ಸಾಕ್ಷ್ಯ, ಪರಿಕರ್...

ಡಿಜಿಟಲ್ ಕನ್ನಡ ಟೀಮ್: ಭಾರತದ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇನ್ನೊಂದೆಡೆ, ಪಠಾನ್ ಕೋಟ್ ಉಗ್ರದಾಳಿಯಲ್ಲಿ ಪಾಕಿಸ್ತಾನದ ಭಾಗಿದಾರಿಕೆ ಬಗ್ಗೆ ಖುದ್ದು ಅಮೆರಿಕವು ಭಾರತಕ್ಕೆ ಕೆಲವು ಸಾಕ್ಷ್ಯಗಳನ್ನು ಒದಗಿಸಿದೆ. ದಕ್ಷಿಣ...

ಭದ್ರತೆ ಗಟ್ಟಿಮಾಡುವ ಬಲಪ್ರದರ್ಶನಕ್ಕೆ ನಮಗೇನೂ ಮುಜುಗರವಿಲ್ಲ- ಅರುಣಾಚಲ ಮತ್ತು ಅಫಘಾನಿಸ್ತಾನದಲ್ಲಿ ಭಾರತದ ಸಂದೇಶ

ಡಿಜಿಟಲ್ ಕನ್ನಡ ಟೀಮ್: 'ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ನಿಯೋಜಿಸಿದ್ದೇ ಆದರೆ ಅದಕ್ಕೆ ಮರು ಕಾರ್ಯತಂತ್ರವನ್ನು ಚೀನಾ ಮಾಡಬೇಕಾಗುತ್ತದೆ.' ಹೀಗಂತ ಚೀನಾ ಸೇನೆಯ ಅಧಿಕೃತ ಪ್ರಕಾಶನವಾದ 'ಪೀಪಲ್ಸ್ ಲಿಬರೇಷನ್ ಆರ್ಮಿ ಡೈಲಿ' ಎಚ್ಚರಿಸಿತ್ತು. ಭಾರತವು...

ರಮ್ಯ ಮೇಡಂ ಗಮನಕ್ಕೆ… ದಾವೂದ್ ಇಬ್ರಾಹಿಂ ಪಾಕಿಸ್ತಾನವೆಂಬ ಸ್ವರ್ಗದಲ್ಲಿರುವ ಸಾಧ್ಯತೆಯನ್ನು ವಿಶ್ವಸಂಸ್ಥೆಯೂ ಒಪ್ಪಿದೆ

  ಡಿಜಿಟಲ್ ಕನ್ನಡ ಟೀಮ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವ ಬಗ್ಗೆ ಒಂಬತ್ತು ವಿಳಾಸಗಳನ್ನು ಭಾರತ ಒದಗಿಸಿತ್ತು. ಈ ಪೈಕಿ ವಿಶ್ವಸಂಸ್ಥೆ ಸಮಿತಿಯು ಮೂರು ವಿಳಾಸಗಳನ್ನು ತೆಗೆದಿರಿಸಿ, ಇನ್ನು ಆರು ವಿಳಾಸಗಳನ್ನು ಒಪ್ಪಿದೆ. 1993ರ...

ಪರಿಕರ್ ಹೇಳಿರೋದು ಸರಿಯಾಗಬೇಕಾದರೆ ರಮ್ಯ ಹೇಳಿದ್ದು ತಪ್ಪಾಗಬೇಕಿಲ್ಲ, ಸಾಕು ಮಾಡೋಣ..ಇದ್ಯಾವ ದೇಶಭಕ್ತಿ ಚರ್ಚೆಯೂ ಅಲ್ಲ!

ಪ್ರವೀಣ್ ಕುಮಾರ್ ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕಕ್ಕೆ ಹೋದಂತೆ. - ರಕ್ಷಣಾ ಮಂತ್ರಿ ಮನೋಹರ ಪಾರಿಕರ್. ಪಾಕಿಸ್ತಾನ ನರಕವಲ್ಲ. ಅಲ್ಲಿನ ಜನ ಒಳ್ಳೆಯವರು.- ರಮ್ಯ, ಕಾಂಗ್ರೆಸ್ ಸದಸ್ಯೆ, ಚಿತ್ರನಟಿ ನಾವು ನಮ್ಮ ಮಿತ್ರರನ್ನು ಬದಲಿಸಬಹುದು, ಆದರೆ ನೆರೆಹೊರೆಯವರನ್ನಲ್ಲ.- ಅಟಲ್...

ಬಲೊಚಿಸ್ತಾನದ ಕುರಿತ ಭಾರತದ ನಿಲುವಿಗೆ ಬಾಂಗ್ಲಾದೇಶದ ಬೆಂಬಲ

ಮಾಹಿತಿ ವಲಯದ ಸಹಕಾರ ಕುರಿತಾಗಿ ವೆಂಕಯ್ಯ ನಾಯ್ಡು ಅವರೊಂದಿಗೆ ಬಾಂಗ್ಲಾದೇಶ ಸಚಿವ ಇನು ಸಮಾಲೋಚನೆ. ವೆಂಕಯ್ಯ ನಾಯ್ಡು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಚಿತ್ರ. ಡಿಜಿಟಲ್ ಕನ್ನಡ ಟೀಮ್: ಬಲೊಚಿಸ್ತಾನದಲ್ಲಿ ಪಾಕಿಸ್ತಾನವು ಎಸಗುತ್ತಿರುವ ಮಾನವ ಹಕ್ಕುಗಳ...

ಪಾಕ್ ‘ಆಡಳಿತದ’ ಕಾಶ್ಮೀರ ಎನ್ನುತ್ತಿದ್ದ ಚೀನಾ ಮಾಧ್ಯಮ ‘ಆಕ್ರಮಿತ’ ಎಂದು ಸ್ವರ ಬದಲಿಸಿದೆ, ಭಾರತದ...

ಡಿಜಿಟಲ್ ಕನ್ನಡ ಟೀಮ್: ಮೋದಿ ಸರ್ಕಾರವು ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲಿ ದೇಶದ ನಿಲುವನ್ನು ಬಿಗಿಗೊಳಿಸುತ್ತಿದ್ದಂತೆ ಯಾರಿಗೆಲ್ಲ ಬಿಸಿ ತಾಗುತ್ತಿದೆ ನೋಡಿ. ಚೀನಾದ ‘ಗ್ಲೋಬಲ್ ಟೈಮ್ಸ್’ ತನ್ನ ಲೇಖನದಲ್ಲಿ ಈ ಕುರಿತು ಪ್ರತಿಕ್ರಿಯಿಸುತ್ತ, ಪಾಕ್...

ನಿಚ್ಚಳವಾಗುತ್ತಿದೆಯೇ ಮೋದಿ ಮಾಸ್ಟರ್ ಸ್ಟ್ರೋಕ್ ಪರಿಣಾಮ? ಪಾಕಿಸ್ತಾನದ ವಿರುದ್ಧ ಎದ್ದೇಳುತ್ತಿದೆ ಗಿಲ್ಗಿಟ್- ಬಾಲ್ಟಿಸ್ತಾನ

ಡಿಜಿಟಲ್ ಕನ್ನಡ ಟೀಮ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಶ್ನಿಸಬೇಕು ಹಾಗೂ ಅದು ಭಾರತದ ಭಾಗ ಎಂದು ಎಂದು ಪ್ರಧಾನಿ ಮೋದಿ ಹೇಳಿದ ಮರುದಿನದಿಂದಲೇ ಪಾಕಿಸ್ತಾನಕ್ಕೆ ಉಸಿರು ಕಟ್ಟತೊಡಗಿದೆ. ಒಂದೆಡೆ...

ಮೋದಿ ನೇತೃತ್ವದ ಭಾರತವು ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಕೊಡಿಸಲಿ, ಬಾಂಬ್ ದಾಳಿಗಳಿಂದ ಸುದ್ದಿಯಾಗಿರುವ ಬಲೊಚಿಸ್ತಾನದ...

ಚೈತನ್ಯ ಹೆಗಡೆ ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಗುರುವಾರ ರಸ್ತೆ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿ 13 ಜನ ಸತ್ತಿರುವ ಹಾಗೂ ಅದಕ್ಕೂ ಒಂದು ದಿನ ಮೊದಲು ಇದೇ ಪ್ರಾಂತ್ಯದ ಆಸ್ಪತ್ರೆಯಲ್ಲಾದ ಸ್ಫೋಟಕ್ಕೆ ಬಲೋಚಿನ ನವ ತಲೆಮಾರಿನ...

ಗುಡ್ ನ್ಯೂಸ್: ಉಗ್ರರ ವಿರುದ್ಧ ಹೋರಾಡದ ಪಾಕಿಸ್ತಾನಕ್ಕೆ ಅಮೆರಿಕದ ಹಣ ಕಡಿತ

ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್... ಡಿಜಿಟಲ್ ಕನ್ನಡ ಟೀಮ್: ಸಾರ್ಕ್ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ 'ನಾವು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರಿ ಪ್ರಯತ್ನ ಮಾಡಿದ್ದೇವೆ' ಎಂದು ಭಾಷಣ ಮಾಡುತ್ತಿರುವಾಗಲೇ, ಅತ್ತ ಅಮೆರಿಕವು ಪಾಕಿಸ್ತಾನಕ್ಕೆ...

ಸಾರ್ಕ್ ಸಭೆಯಲ್ಲಿ ರಾಜನಾಥ ಸಿಂಗ್ ಮಾತುಗಳನ್ನು ವರದಿಯಾಗದಂತೆ ತಡೆದ ಪಾಕಿಸ್ತಾನ, ಇನ್ನಾದರೂ ಭಾಯಿಜಾನ್ ಗುಂಗಿಂದ...

ಡಿಜಿಟಲ್ ಕನ್ನಡ ಟೀಮ್: ಪ್ರಜಾಪ್ರಭುತ್ವ ರಾಷ್ಟ್ರದ ಗೃಹ ಸಚಿವರೊಬ್ಬರ ಮಾತು ಬಿತ್ತರವಾಗದಂತೆ ತಡೆದು ಅಸಹಿಷ್ಣುತೆ ಮೆರೆದಿದೆ ಪಾಕಿಸ್ತಾನ ಸರ್ಕಾರ. ಭಾರತ ಮಾತ್ರ ಪ್ರತಿವರ್ಷ ಒಂದಿಲ್ಲೊಂದು ವೇದಿಕೆಗೆ ಪಾಕಿಸ್ತಾನಿ ಪ್ರಮುಖರನ್ನು ಆಹ್ವಾನಿಸುತ್ತದೆ ಹಾಗೂ ಅವರ ಭಾರತ...

ಹೌದೇನು ಇದು ಬರಿಯ ಕಲ್ಲು ತೂರಾಟ? ಹಾಗೆಂದು ನಂಬಿದೊಡನೆ ಜಮ್ಮು-ಕಾಶ್ಮೀರವನ್ನು ಕಳೆದುಕೊಳ್ಳಲಿದೆ ಭಾರತ!

(ಚಿತ್ರಕೃಪೆ- ರಾಯಿಟರ್ಸ್) 'ಬಹುಶಃ ಬುರ್ಹನ್ ವಾನಿ ಎಂಬ ಉಗ್ರನನ್ನು ಕೊಲ್ಲುವುದಕ್ಕಿಂತ ಜೀವಂತ ಹಿಡಿದಿದ್ದರೆ ಕಣಿವೆಯಲ್ಲಿ ಹಿಂಸಾಚಾರ ಆಗುತ್ತಿರಲಿಲ್ಲವೇನೋ...' 'ನಾವು ಕಾಶ್ಮೀರಿ ಮುಸ್ಲಿಮರ ಹೃದಯ ಗೆಲ್ಲುವುದಕ್ಕೆ ನೋಡಬೇಕು. ಅದರ ಮೊದಲ ಭಾಗವಾಗಿ ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಪಸ್ಥಿತಿ ಕಡಿಮೆ...

ಪಾಕಿಸ್ತಾನ ಖರೀದಿಸಬೇಕಿದ್ದ ಎಫ್ 16 ಯುದ್ಧ ವಿಮಾನಕ್ಕೆ ಸಬ್ಸಿಡಿ ನಿರಾಕರಿಸಿದ ಅಮೆರಿಕ, ಪ್ರಸ್ತುತ ಬೆಲೆಗಿಂತ...

ಡಿಜಿಟಲ್ ಕನ್ನಡ ಟೀಮ್ ಕೆಲವು ತಿಂಗಳ ಹಿಂದೆ ಪಾಕಿಸ್ತಾನಕ್ಕೆ ಎಂಟು ಎಫ್ 16 ಯುದ್ಧ ವಿಮಾನವನ್ನು ಕಡಿಮೆ ಬೆಲೆಗೆ ನೀಡಲು ಒಪ್ಪಿಗೆ ನೀಡಿದ್ದ ಅಮೆರಿಕ ಈಗ ತನ್ನ ನಿಲವು ಬದಲಿಸಿದೆ. ಆ ಮೂಲಕ ಯುದ್ಧ...

ಪಾಕ್ ಹದ ಮಾಡೋಕೆ ಭಾರತದ ಸಹಾಯ ಬೇಕೆಂದ ಟ್ರಂಪ್, ಯುದ್ಧ ವಿಮಾನ ಕೊಡುತ್ತಿರೋದಕ್ಕೆ ಅಮೆರಿಕ...

ಡಿಜಿಟಲ್ ಕನ್ನಡ ಟೀಮ್ ಸದ್ಯ ಅಮೆರಿಕದಿಂದ ಭಾರತಕ್ಕೆ ಸಕಾರಾತ್ಮಕ ಸಂದೇಶಗಳು ರವಾನೆಯಾಗುತ್ತಿವೆ. ಆ ಪೈಕಿ ಒಂದು ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನ ಮಾರಾಟದ ಅಮೆರಿಕದ ನಿರ್ಧಾರವನ್ನು ಸ್ವತಃ ಅಮೆರಿಕ ಸಂಸತ್ತಿನ ಸದಸ್ಯರೇ ವಿರೋಧಿಸಿರುವುದು....